ಕರಾವಳಿ ಚಿತ್ರದ ಮೇಕಿಂಗ್ ಔಟ್; ವಿಡಿಯೋ ಹಂಚಿಕೊಂಡ ರಾಗಿಣಿ ಪ್ರಜ್ವಲ್! ಲಿಂಕ್ ಇಲ್ಲಿದೆ

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಕರಾವಳಿ’ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ಚಿತ್ರದ ಮೇಕಿಂಗ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದ್ದು, ಇದನ್ನು ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಪ್ರಜ್ವಲ್ ಹಂಚಿಕೊಂಡಿದ್ದಾರೆ.

‘ಕರಾವಳಿ’ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರದ ಖದರ್‌ ಅನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾ ಅವರ ಕಮ್‌ಬ್ಯಾಕ್ ಚಿತ್ರ ಎಂಬ ಮಾತುಗಳೂ ಕೇಳಿಬಂದಿವೆ. ಚಿತ್ರದ ಪಾತ್ರಕ್ಕಾಗಿ ಪ್ರಜ್ವಲ್ ಅವರು ಸಾಕಷ್ಟು ಶ್ರಮವಹಿಸಿರುವುದು ಮೇಕಿಂಗ್ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ.

ಚಿತ್ರದ ಚಿತ್ರೀಕರಣದ ವೇಳೆ ಪ್ರಜ್ವಲ್ ಅವರು ಕಂಬಳದ ಕೋಣಗಳೊಂದಿಗೆ ಸಾಹಸ ದೃಶ್ಯಗಳಲ್ಲಿ ಭಾಗವಹಿಸಿದ್ದಾರೆ. ಲಾರಿಯ ಮೇಲಿಂದ ಕೆಳಗೆ ಹಾರುವ ದೃಶ್ಯಗಳು, ಕೆಸರಿನಲ್ಲಿ ಓಡುವುದು ಸೇರಿದಂತೆ ಹಲವು ಸವಾಲಿನ ದೃಶ್ಯಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಕೋಣಗಳ ನಡುವೆ ಚಿತ್ರೀಕರಣದಲ್ಲೂ ಭಾಗಿಯಾಗಿದ್ದಾರೆ.

ಯಕ್ಷಗಾನದ ಹಿನ್ನೆಲೆಯ ಸಾಹಸ ದೃಶ್ಯಗಳಲ್ಲೂ ಪ್ರಜ್ವಲ್ ದೇವರಾಜ್ ಗಮನ ಸೆಳೆದಿದ್ದಾರೆ. ಯಕ್ಷಗಾನ ವೇಷ ಧರಿಸಿ, ಎರಡೂ ಕೈಗಳಲ್ಲಿ ಪಂಜು ಹಿಡಿದು ಸಾಹಸ ಮಾಡುವ ದೃಶ್ಯಗಳು ಕೂಡ ಮೇಕಿಂಗ್ ವಿಡಿಯೋದಲ್ಲಿ ಮೂಡಿಬಂದಿವೆ. ಈ ದೃಶ್ಯಗಳಿಗಾಗಿ ಅವರು ಪಟ್ಟ ಶ್ರಮವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಈ ಮೇಕಿಂಗ್ ವಿಡಿಯೋವನ್ನು ರಾಗಿಣಿ ಪ್ರಜ್ವಲ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ‘ಕರಾವಳಿ’ ಚಿತ್ರಕ್ಕೆ ಪ್ರೀತಿ ಹಾಗೂ ಬೆಂಬಲ ನೀಡುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.

“Thank you for all the love & support for Karavalli!” ಎಂದು ರಾಗಿಣಿ ಪ್ರಜ್ವಲ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಇದೀಗ ಈ ಮೇಕಿಂಗ್ ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದ್ದು, ಪ್ರಜ್ವಲ್ ದೇವರಾಜ್ ಅವರ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವೀಡಿಯೋ ಲಿಂಕ್ ಇಲ್ಲಿದೆhttps://www.instagram.com/reel/DbPy0RMSzWd/?igsh=MWRqNXBhNXVwMTRpdw==