ಅಮೆರಿಕದ ಫಿಲಡೆಲ್ಪಿಯಾದಲ್ಲಿ ಐಸಿಎಂ ಉದ್ಘಾಟನೆ ಎಂಐಟಿಯ ಐವರು ಪ್ರಾಧ್ಯಾಪಕರು ಭಾಗಿ

ಉಡುಪಿ: ಮಣಿಪಾಲ ಅಕಾಡೆಮಿ ಆಫ್ (ಮಾಹೆ) ಹೈಯರ್ ಎಜುಕೇಶನ್ ಅಂಗಸಂಸ್ಥೆ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಗಣಿತ ವಿಭಾಗದ ಐವರು ಪ್ರಾಧ್ಯಾಪಕರು ಅಮೆರಿಕದ ಫಿಲಡೆಲ್ಲಿಯಾದಲ್ಲಿ ಆರಂಭಗೊಂಡಿರುವ ಅಂತಾರಾಷ್ಟ್ರೀಯ ಗಣಿತಜ್ಞರ ಮಹಾ ಸಮ್ಮೇಳನ (ಐಸಿಎಂ)ದಲ್ಲಿ ಸಂಸ್ಥೆಯನ್ನು ಪ್ರತಿನಿಧಿಸಿದ್ದಾರೆ.

ಅಂತಾರಾಷ್ಟ್ರೀಯ ಗಣಿತ ಒಕ್ಕೂಟವು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸುವ ಈ ಸಮ್ಮೇಳನ ವಿಶ್ವದ ಪ್ರತಿಷ್ಠಿತ ಗಣಿತ ಸಮ್ಮೇಳನವಾಗಿದ್ದು, ಜಾಗತಿಕ ಮಟ್ಟದ ಗಣಿತಜ್ಞರು, ಸಂಶೋಧಕರು ಹಾಗೂ ಶಿಕ್ಷಣ ತಜ್ಞರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುತ್ತದೆ.

ಗುರುವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಗಣಿತ ಕ್ಷೇತ್ರಕ್ಕೆ ಅಸಾಧಾರಣ ಕೊಡುಗೆ ನೀಡಿದ ಗಣ್ಯರಿಗೆ ಫೀಲ್ಡ್ ಪದಕ, ಕಾರ್ಲ್ ಫ್ರಿಡ್ರಿಕ್ ಗಾಸ್ ಪ್ರಶಸ್ತಿ, ಚೆರ್ನ್ ಪದಕ, ಐಎಂಯು ಅಬಾಕಸ್ ಪದಕ ಹಾಗೂ ಲೀಲಾವತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ఎంఐటి ಮಣಿಪಾಲದ ಗಣಿತ ವಿಭಾಗದ ಪ್ರಾಧ್ಯಾಪಕ ಡಾ.ಕುಂಚಂ ಶ್ಯಾಮ್‌ಪ್ರಸಾದ್, ಡಾ.ಕೆಡುಕೋಡಿ ಬಾಬುಶ್ರೀ ಶ್ರೀನಿವಾಸ್, ಡಾ.ಹರಿಕೃಷ್ಣನ್ ಪನಕ್ಕಲ್, ಡಾ.ವಾದಿರಾಜ ಭಟ್ಟಜಿ.ಆರ್., ಡಾ.ಶೋಭಾ ಎಂ.ಇ. ಸಮ್ಮೇಳನದಲ್ಲಿ ಇವರು ತಮ್ಮ ಪ್ರಬಂಧಗಳನ್ನು ಭಾಗವಹಿಸಿದ್ದಾರೆ. ಸಂಶೋಧನಾ ಮಂಡಿಸುವ ಜತೆಗೆ ವಿಶ್ವದ ವಿವಿಧ ದೇಶಗಳ ಗಣ್ಯ ಗಣಿತಜ್ಞರೊಂದಿಗೆ ತಾಂತ್ರಿಕ ಅಧಿ ವೇಶನಗಳ ಅಧ್ಯಕ್ಷತೆ ವಹಿಸುತ್ತಿದ್ದಾರೆ.

ಜು.30ರವರೆಗೆ ನಡೆಯಲಿರುವ ಈ ಮಹಾ ಸಮ್ಮೇಳನವು ಗಣಿತ ಕ್ಷೇತ್ರದಲ್ಲಿನ ಇತ್ತೀಚಿನ ಸಂಶೋಧನಾ ಬೆಳವಣಿಗೆಗಳ ಕುರಿತು ಚರ್ಚೆ, ಜ್ಞಾನ ವಿನಿಮಯ ಹಾಗೂ ಸಂಶೋಧನಾ ಬಲಪಡಿಸುವ ಅಂತಾರಾಷ್ಟ್ರೀಯ ಸಹಯೋಗವನ್ನು ಮಹತ್ವದ ವೇದಿಕೆಯಾಗಿದೆ. ಎಂಐಟಿ ಮಣಿಪಾಲದ ಐವರು ಪ್ರಾಧ್ಯಾಪಕರು ಈ ಪ್ರತಿಷ್ಠಿತ ಜಾಗತಿಕ ಸಮ್ಮೇಳನದಲ್ಲಿ ಭಾಗವಹಿಸಿರುವುದು ಸಂಸ್ಥೆಯ ಶೈಕ್ಷಣಿಕ ಮತ್ತು ಸಂಶೋಧನಾ ಸಾಧನೆಗೆ ಮತ್ತೊಂದು ಮಹತ್ವದ ಮೈಲುಗಲ್ಲಾಗಿದೆ.