ನಿಟ್ಟೆ ಬ್ರಹ್ಮಾ ಕುಮಾರೀಸ್ ವೃಂದಾವನ ಧ್ಯಾನ ಕೇಂದ್ರದಲ್ಲಿ ಯೋಗ ತಪಸ್ಯ ಹಾಗೂ ಆಷಾಡದ ಸ್ನೇಹ ಮಿಲನ ಕಾರ್ಯಕ್ರಮ

ಕಾರ್ಕಳ: ನಿಟ್ಟೆ ಬ್ರಹ್ಮಾ ಕುಮಾರೀಸ್ ವೃಂದಾವನ ಧ್ಯಾನ ಕೇಂದ್ರದಲ್ಲಿ ಯೋಗ ತಪಸ್ಯ ಹಾಗು ಆಷಾಡದ ಸ್ನೇಹ ಮಿಲನ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿದ್ದ ಗುಜರಾತಿನ ಗಾಂಧಿನಗರ ಬ್ರಹ್ಮಾ ಕುಮಾರಿ ಕೇಂದ್ರದ ಸಂಚಾಲಕಿ ವರಿಷ್ಠ ರಾಜಯೋಗಿನಿ ಬಿ ಕೆ ಕೈಲಾಶ್ ದೀದಿ ಜಿ ಇವರು ಈಶ್ವರೀಯ ಸೇವೆಯ ಜೀವನದ ತನ್ನ ಆಘಾತ ಅನುಭವದ ವಿಷಯಗಳನ್ನು ಹಂಚಿಕೊಂಡರು. ಅವರ ಅನುಭವಯುಕ್ತ ವಚನಗಳು ಜೀವನವನ್ನು ಸುಂದರವಾಗಿಸುವಂತಹ, ಹಾಗು ಮಾನವನ ಸರ್ವತೋಮುಖ ಬೆಳೆವಣಿಗೆಗೆ ಮಾರ್ಗದರ್ಶನವಾಗಿವೆ.

ಮಂಗಳೂರಿನ ಬ್ರಹ್ಮಾಕುಮಾರಿ ಕೇಂದ್ರದ ಸಂಚಾಲಕಿ ಬಿ ಕೆ ವಿಶ್ವೇಶ್ವರಿ ಯವರು ಈ ಸಂದರ್ಭದಲ್ಲಿ ಮಾತಾಡಿ, ಬ್ರಹ್ಮಾಕುಮಾರಿ ಸಂಸ್ಥೆಯ ಅಧ್ಯಾತ್ಹ್ಮಿಕ ಹಾಗು ಸಾಮಾಜಿಕ ಕಾರ್ಯ ವೈಖರಿಗಳ ಬಗ್ಗೆ ತಿಳಿಸಿದರು.

ಸಂಸ್ಥೆಯ ವತಿಯಿಂದ ಕಲಿಸುವ ರಾಜಯೋಗ ಶಿಕ್ಷಣ ದಿಂದ ಮನಸಿನ ಏಕಾಗ್ರತೆ ವೃದ್ಧಿಯಾಗುವುದರೊಂದಿಗೆ ಮನಶಾಂತಿ ಲಭ್ಯವಾಗುತದೆ ಎಂದರು.

ಕಾರ್ಯಕ್ರಮದಲ್ಲಿ, ಬ್ರಹ್ಮಾಕುಮಾರಿ ಸಂಸ್ಥೆಯ ಸದಸ್ಯರ ಜೊತೆಗೆ ಊರಿನ ನೂರಾರು ಸಾರ್ವಜನಿಕರೊಂದಿಗೆ ಆಷಾಡದ ಸ್ನೇಹ ಮಿಲನ ಸಮಾರಂಭವನ್ನು ವಿವಿಧ ಬಗೆಯ ವಿಶಿಷ್ಟ ಭೋಜನದೊಂದಿಗೆ ಆಚರಿಸಲಾಯಿತು.

ಧ್ಯಾನ ಕೇಂದ್ರದ ಸಂಚಾಲಕರಾದ ಬಿ ಕೆ ಮನೋಹರ್ ಶೆಟ್ಟಿ ಯವರು ಕಾರ್ಯಕ್ರಮ ನಿರೂಪಿಸಿದರು ಹಾಗು ಬಿ ಕೆ ಯಶೋದಾ ಧನ್ಯವಾದ ಸಲ್ಲಿಸಿದರು.