ಉಡುಪಿ ನಗರದ ಅಂಬಲಪಾಡಿಯಲ್ಲಿರುವ ಹೈಟೆಕ್ ಮೆಡಿಕೇರ್ ಆಸ್ಪತ್ರೆ ತನ್ನ ನ್ಯೂರೋಸರ್ಜರಿ ವಿಭಾಗವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಖ್ಯಾತ ನ್ಯೂರೋಸರ್ಜನ್ ಡಾ. ಪವನ್ಕುಮಾರ್ ಎಸ್. ಶೆಟ್ಟಿ ಅವರನ್ನು ಪೂರ್ಣಾವಧಿ ಸಲಹೆಗಾರ ನ್ಯೂರೋಸರ್ಜನ್ ಆಗಿ ನೇಮಕ ಮಾಡಿದೆ.
ಎಂಬಿಬಿಎಸ್, ಎಂಎಸ್ ಹಾಗೂ ಎಂ.ಚಿ. (ನ್ಯೂರೋಸರ್ಜರಿ) ಪದವೀಧರರಾಗಿರುವ ಡಾ. ಪವನ್ಕುಮಾರ್ ಎಸ್. ಶೆಟ್ಟಿ ಗೋಲ್ಡ್ ಮೆಡಲಿಸ್ಟ್ ಆಗಿದ್ದು, ಮೆದುಳು ಹಾಗೂ ಬೆನ್ನುಹುರಿಗೆ ಸಂಬಂಧಿಸಿದ ವಿವಿಧ ಕಾಯಿಲೆಗಳ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿದ್ದಾರೆ.
ಇವರು ತಲೆಗಾಯ ಮತ್ತು ನ್ಯೂರೋ ಟ್ರಾಮಾ, ಪಾರ್ಶ್ವವಾಯು (ಸ್ಟ್ರೋಕ್) ಮತ್ತು ಸೆರೆಬ್ರೋವಾಸ್ಕುಲರ್ ಶಸ್ತ್ರಚಿಕಿತ್ಸೆ, ಬೆನ್ನುಹುರಿಯ ಕ್ಷೀಣತೆ ಮತ್ತು ಸಿಯಾಟಿಕಾ ಸಮಸ್ಯೆಗಳು, ಪೆರಿಫೆರಲ್ ನರಗಳ ದುರಸ್ತಿ, ಮಕ್ಕಳ ನ್ಯೂರೋ ಸಂಬಂಧಿತ ಕಾಯಿಲೆಗಳು, ತಲೆನೋವು ಹಾಗೂ ಕುತ್ತಿಗೆ ನೋವಿನ ಚಿಕಿತ್ಸೆಯಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ.
ಡಾ. ಪವನ್ಕುಮಾರ್ ಎಸ್. ಶೆಟ್ಟಿ ಅವರು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 10.00ರಿಂದ ಮಧ್ಯಾಹ್ನ 1.00ರವರೆಗೆ ಹಾಗೂ ಸಂಜೆ 4.00ರಿಂದ 6.00ರವರೆಗೆ ಆಸ್ಪತ್ರೆಯಲ್ಲಿ ಲಭ್ಯವಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಅಪಾಯಿಂಟ್ಮೆಂಟ್ ಕಾಯ್ದಿರಿಸಲು 7406868214 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಆಸ್ಪತ್ರೆಯು 24×7 ತುರ್ತು ಚಿಕಿತ್ಸಾ ಸೇವೆಯನ್ನೂ ಒದಗಿಸುತ್ತಿದೆ.















