ಜುಲೈ 27ರಿಂದ ಆಗಸ್ಟ್ 1ರವರೆಗೆ ಮಣಿಪಾಲದಲ್ಲಿ ಯಕೃತ್ತಿನ ಆರೋಗ್ಯ ಜಾಗೃತಿ ಶಿಬಿರ

ಮಣಿಪಾಲ: ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಕಾಯಚಿಕಿತ್ಸಾ ವಿಭಾಗದ ವತಿಯಿಂದ ಜುಲೈ 27ರಿಂದ ಆಗಸ್ಟ್ 1ರವರೆಗೆ ಪ್ರತಿದಿನ ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ಯಕೃತ್ತಿನ ಆರೋಗ್ಯ ಜಾಗೃತಿ ಶಿಬಿರ ಆಯೋಜಿಸಲಾಗಿದೆ.

ಶಿಬಿರದಲ್ಲಿ ಹೆಪಟೈಟಿಸ್, ಕಾಮಾಲೆ, ಲಿವರ್ ಸಿರೋಸಿಸ್, ಯಕೃತ್ತಿನ ಹಿಗ್ಗುವಿಕೆ ಹಾಗೂ ಮದ್ಯಪಾನದಿಂದ ಉಂಟಾಗುವ ಯಕೃತ್ತಿನ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸುವುದರೊಂದಿಗೆ ಉಚಿತ ವೈದ್ಯಕೀಯ, ಆಹಾರ ಹಾಗೂ ಯೋಗ ಸಲಹೆ ನೀಡಲಾಗುವುದು. ಮದ್ಯಪಾನ ವ್ಯಸನಿಗಳಿಗೆ ವಿಶೇಷ ಸಮಾಲೋಚನೆಯೂ ಇರಲಿದೆ.

ಶಿಬಿರದ ಅಂಗವಾಗಿ ಪಂಚಕರ್ಮ, ಪ್ರಯೋಗಾಲಯ ಪರೀಕ್ಷೆಗಳು, ಎಕ್ಸ್-ರೇ, ಔಷಧಿ, ಫಿಸಿಯೋಥೆರಪಿ ಸೇರಿದಂತೆ ವಿವಿಧ ಸೇವೆಗಳಿಗೆ ವಿಶೇಷ ರಿಯಾಯಿತಿ ನೀಡಲಾಗುತ್ತದೆ.

ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆಯುವಂತೆ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ 81234 03233 ಅನ್ನು ಸಂಪರ್ಕಿಸಬಹುದು.