ಉಡುಪಿ: ನಿಸರ್ಗ ಫ್ರೆಶ್ ಕೋಲ್ಡ್ ಪ್ರೆಸ್ಡ್ ಆಯಿಲ್ ಮಿಲ್ ಫ್ಯಾಕ್ಟರಿ ಔಟ್ಲೆಟ್ನ ಉದ್ಘಾಟನಾ ಸಮಾರಂಭವು ಜುಲೈ 12ರಂದು ಬೆಳಿಗ್ಗೆ 10.30ಕ್ಕೆ ಕಾಪು ದಂಡತೀರ್ಥ ಶಾಲೆ ಸಮೀಪದ ಪ್ರೆಸ್ಟೀಜ್ ಬಿಲ್ಡಿಂಗ್ನಲ್ಲಿ ನಡೆಯಲಿದೆ.
ಶ್ರೀ ಹಳೆ ಮಾರಿಗುಡಿ ದೇವಸ್ಥಾನದ ಮಾಜಿ ವ್ಯವಸ್ಥಾಪಕ ಟ್ರಸ್ಟಿ ಕೆ. ಶ್ರೀಧರ್ ಶೆಣೈ ಅವರು ನೂತನ ಔಟ್ಲೆಟ್ನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕಾಪು ಬಿಲ್ಲವರ ಸಹಾಯಕ ಸಂಘ (ರಿ.) ಗೌರವಾಧ್ಯಕ್ಷ ಪ್ರಭಾಕರ ಪೂಜಾರಿ ಹಾಗೂ ಸಮಾಜಸೇವಕ ಸೂರಿ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನಿಸರ್ಗ ಫ್ರೆಶ್ ಆಯಿಲ್ಸ್ & ಸ್ಪೈಸಸ್, ಉಡುಪಿ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ತಿಳಿಸಿದ್ದಾರೆ.















