ಮಣಿಪಾಲದಲ್ಲಿ ಜುಲೈ: 11 ರಂದು ‘Master Canva with AI’ ವಿಶೇಷ ಕಾರ್ಯಾಗಾರ: ಭಾಗವಹಿಸಿ Ai ನಲ್ಲಿ ಮಾಸ್ಟರ್ ಗಳಾಗಿ

ಮಣಿಪಾಲ: ಡಿಜಿಟಲ್ ವಿನ್ಯಾಸ, ಕೃತಕ ಬುದ್ಧಿಮತ್ತೆ (AI), ಬ್ರ್ಯಾಂಡಿಂಗ್ ಹಾಗೂ ಕಂಟೆಂಟ್ ಸ್ಟ್ರಾಟಜಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು, ವಿನ್ಯಾಸಕರು, ಫ್ರೀಲಾನ್ಸರ್‌ಗಳು ಮತ್ತು ಉದ್ಯಮಿಗಳಿಗಾಗಿ ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ವತಿಯಿಂದ “Master Canva with AI, Branding & Content Strategy” ಎಂಬ ಒಂದು ದಿನದ ಉನ್ನತ ಮಟ್ಟದ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ಜುಲೈ 11, 2026ರ ಶನಿವಾರ ಬೆಳಿಗ್ಗೆ 10ರಿಂದ ಸಂಜೆ 4.30ರವರೆಗೆ ಮಣಿಪಾಲದ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್‌ನ 3ನೇ ಮಹಡಿಯಲ್ಲಿರುವ School of IT Skills – Centre of Excellence in Artificial Intelligenceನಲ್ಲಿ ತರಬೇತಿ ನಡೆಯಲಿದೆ.

ಕಾರ್ಯಾಗಾರದಲ್ಲಿ AI ಆಧಾರಿತ Canva ವಿನ್ಯಾಸ ವಿಧಾನಗಳು, Instagram, LinkedIn ಹಾಗೂ YouTubeಗಾಗಿ ಪರಿಣಾಮಕಾರಿ ಕಂಟೆಂಟ್ ಸೃಷ್ಟಿ, Brand Kit ಅಭಿವೃದ್ಧಿ, ಫ್ರೀಲಾನ್ಸ್ ವರ್ಕ್‌ಫ್ಲೋ, Startup Brand Sprint Challenge ಹಾಗೂ ಪೋರ್ಟ್‌ಫೋಲಿಯೊಗೆ ಸೂಕ್ತವಾದ ಸೃಜನಾತ್ಮಕ ಯೋಜನೆಗಳ ಕುರಿತು ತರಬೇತಿ ನೀಡಲಾಗುತ್ತದೆ.
ಭಾಗವಹಿಸುವವರಿಗೆ Canva AI Prompt Library, Content Creator Playbook, Social Media Design Frameworks, Brand Kit Templates ಹಾಗೂ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
ಈ ಕಾರ್ಯಾಗಾರದಲ್ಲಿ ಭಾಗವಹಿಸಲು ₹750 ಶುಲ್ಕ ನಿಗದಿಪಡಿಸಲಾಗಿದ್ದು, ಮಧ್ಯಾಹ್ನದ ಊಟ ಮತ್ತು ಉಪಹಾರದ ವ್ಯವಸ್ಥೆಯೂ ಇರಲಿದೆ.

ಹೆಚ್ಚಿನ ಮಾಹಿತಿಗಾಗಿ 91879 74688 ಅಥವಾ 73497 80581 ಸಂಖ್ಯೆಗೆ ಸಂಪರ್ಕಿಸಬಹುದು. ನೋಂದಣಿಗಾಗಿ ಪೋಸ್ಟರ್‌ನಲ್ಲಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಿ