ಉಡುಪಿ: ಟೈಮಿಂಗ್ಸ್ ವಿಚಾರದಲ್ಲಿ ಸಿಟಿ ಬಸ್ ಚಾಲಕರ ನಡುವೆ ವಾಗ್ವಾದ- ಸಿನಿಮೀಯ ರೀತಿಯಲ್ಲಿ ಎರಡೆರಡು ಬಾರಿ ಬಸ್ ಗೆ ಡಿಕ್ಕಿ ಹೊಡೆದು ಹುಚ್ಚಾಟ ಮೆರೆದ ಸಿಟಿ ಬಸ್ ಚಾಲಕ!

ಉಡುಪಿ: ಟೈಮಿಂಗ್‌ ವಿಚಾರದಲ್ಲಿ ಎರಡು ಸಿಟಿ ಬಸ್ ಚಾಲಕರ ನಡುವೆಯೇ ವಾಗ್ವಾದ ನಡೆದು ಬಳಿಕ ಸಿನಿಮೀಯ ರೀತಿಯಲ್ಲಿ ಬಸ್ಸುಗಳನ್ನು ಡಿಕ್ಕಿ ಹೊಡೆಸಿಕೊಂಡು ಹುಚ್ಚಾಟ ಮೆರೆದ ಘಟನೆ ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.

ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಟಿಎಂಟಿ ಬಸ್‌ ನಿಂತಿದ್ದ ವೇಳೆ, ಪಿಎಂಟಿ ಬಸ್‌ ಅಡ್ಡವಾಗಿ ಬಂದು ನಿಂತಿದೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಟಿಎಂಟಿ ಬಸ್‌ ಚಾಲಕ, ತನ್ನ ಬಸ್‌ನಿಂದ ಪಿಎಂಟಿ ಬಸ್‌ಗೆ ಉದ್ದೇಶಪೂರ್ವಕವಾಗಿ ಎರಡು ಬಾರಿ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯಿಂದ ಆತಂಕಗೊಂಡ ಪ್ರಯಾಣಿಕರು ಬಸ್‌ನಿಂದ ಇಳಿದು ಸುರಕ್ಷಿತ ಸ್ಥಳಕ್ಕೆ ತೆರಳಿದರು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ.

ಸಾರ್ವಜನಿಕರ ಪ್ರಾಣದ ಜತೆ ಚೆಲ್ಲಾಟವಾಡುವ ರೀತಿಯಲ್ಲಿ ಕೆಲ ಸಿಟಿ ಬಸ್‌ ಚಾಲಕರು ವರ್ತಿಸುತ್ತಿದ್ದು, ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಬಸ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ನಿಯಮ ಉಲ್ಲಂಘಿಸುವ ಬಸ್‌ಗಳ ಪರವಾನಗಿಯನ್ನು ರದ್ದುಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.