ಹೆಮ್ಮಾಡಿ: ಸಾರ್ವಜನಿಕ ಶ್ರೀ ಕಾಸನಾಡಿ ಬೊಬ್ಬರ್ಯ ಮತ್ತು ಶ್ರೀ ಪರಿವಾರ ದೈವಸ್ಥಾನ, ಸಂತೋಷನಗರದಲ್ಲಿ ಜುಲೈ 4 ಹಾಗೂ 5ರಂದು ಶ್ರೀ ಕಾಸನಾಡಿ ಬೊಬ್ಬರ್ಯ ಮತ್ತು ಶ್ರೀ ಪರಿವಾರ ದೈವಗಳ 8ನೇ ವರ್ಷದ ವರ್ಧಂತ್ಯೋತ್ಸವ ಭಕ್ತಿಭಾವದಿಂದ ನಡೆಯಲಿದೆ.
ಜುಲೈ 4ರಂದು ಸಂಜೆ 6 ಗಂಟೆಯಿಂದ ಹೋಮ-ಹವನ, ಹಣ್ಣುಕಾಯಿ, ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿವೆ.
ಜುಲೈ 5ರಂದು ಬೆಳಿಗ್ಗೆ 10 ಗಂಟೆಯಿಂದ ಹಣ್ಣುಕಾಯಿ, ಮಹಾಮಂಗಳಾರತಿ ಸೇವೆ ನೆರವೇರಲಿದ್ದು, ಬಳಿಕ ಮಧ್ಯಾಹ್ನ ಅನ್ನಸಂತರ್ಪಣೆ ಆಯೋಜಿಸಲಾಗಿದೆ.
ಅನ್ನದಾನದ ಸೇವೆಯನ್ನು ಶ್ರೀಮತಿ ಮೂಕಾಂಬಿಕಾ ಹಾಗೂ ಅವರ ಮಕ್ಕಳಾದ ಸುಬ್ರಹ್ಮಣ್ಯ, ವಿನಾಯಕ ಮತ್ತು ಶಿವಲೀಲ (ಬೆಂಗಳೂರು) ವಹಿಸಿಕೊಂಡಿದ್ದು, ವಾದ್ಯದ ಸೇವೆಯನ್ನು ವರದಾ ಚಂದ್ರ ಪೂಜಾರಿ ಹಾಗೂ ಪುತ್ರ ನಿಹಾಲ್ (ಸಂತೋಷನಗರ) ಸಲ್ಲಿಸಲಿದ್ದಾರೆ.
ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ದೈವಸ್ಥಾನದ ಅಧ್ಯಕ್ಷರು, ಕಾರ್ಯದರ್ಶಿಗಳು, ಸರ್ವ ಸದಸ್ಯರು ಹಾಗೂ ಊರ ಗ್ರಾಮಸ್ಥರು ಮನವಿ ಮಾಡಿದ್ದಾರೆ.

















