ಬ್ರಹ್ಮಾವರ ಸಂತೆಕಟ್ಟೆಯಲ್ಲಿ ವಿರಾಟ್ ಫ್ರೆಂಡ್ಸ್ ವತಿಯಿಂದ ಆಯೋಜಿಸಲಾದ ಮಾನ್ಸೂನ್ ಟ್ರೋಫಿ -26 ಕ್ರಿಕೆಟ್ ಪಂದ್ಯಾಟವು ಶುಭಾರಂಭಗೊಂಡಿತು.
ದುಬೈ ಟೆಕ್ನೋಟೈಟಾನ್ಸ್ ಕ್ರಿಕೆಟ್ ತಂಡದ ನಾಯಕ,ದುಬೈ ಟೆಕ್ನೋಮರೀನ್ ಸಂಸ್ಥೆಯ ಅಕೌಂಟ್ಸ್ ಹಾಗೂ ಮಾರ್ಕೆಟಿಂಗ್ ವಿಭಾಗದ ಅಧಿಕಾರಿ ಹಾಗೂ ಸ್ಪೋರ್ಟ್ ಕನ್ನಡ ದೃಶ್ಯವಾಹಿನಿಯ ಮಧ್ಯಪ್ರಾಚ್ಯದೇಶಗಳ ಪ್ರತಿನಿಧಿಯಾಗಿರುವ ಉಡುಪಿ ಸೂರಾಲು ಮೂಲದ ವಿಠಲ ನಾಯಕರು ಮಾನ್ಸೂನ್ ಟ್ರೋಫಿಯನ್ನು ಕ್ರಿಕೆಟ್ ಪಂದ್ಯಾಟವನ್ನು ದೀಪಬೆಳಗಿಸಿ ಉದ್ಘಾಟಿಸಿದರು.
ತಮ್ಮ ಉದ್ಘಾಟನಾ ಭಾಷಣದಲ್ಲಿ ವಿಠಲ ನಾಯಕರು “ವ್ಯಕ್ತಿಯೊಬ್ಬನ ಯಶಸ್ವೀ ಬದುಕಿಗೆ ಕ್ರೀಡೆಯ ಸರ್ವತೋಮುಖ ಕೊಡುಗೆಯನ್ನು ತಿಳಿಹೇಳಿದರು. ಅಂತೆಯೇ ಮಾನ್ಸೂನ್ ಮಳೆಯ ಕಣ್ಣುಮುಚ್ಚಾಲೆ ಆಟದ ನಡುವೆ ವಿರಾಟ್ ಫ್ರೆಂಡ್ಸ್ ಆಯೋಜಿಸುತ್ತಿರುವ ಕ್ರಿಕೆಟ್ ಪಂದ್ಯಾಟ ಮಾನ್ಸೂನ್ ಟ್ರೋಫಿ – 26 ಪರಿಪೂರ್ಣ ಯಶಸ್ಸನ್ನು ಪಡೆಯಲಿ”ಎಂದು ಶುಭಹಾರೈಸಿದರು.
ಈ ಶುಭ ಸಂದರ್ಭದಲ್ಲಿ ವಿರಾಟ್ ಫ್ರೆಂಡ್ಸ್ ಸಂಸ್ಥೆಯ ರಮೇಶ್,ಮನೋಹರ್ ಸರ್, ಪ್ರಶಾಂತ್ ಪೂಜಾರಿ,ಹರೀಶ್ ಉಪಸ್ಥಿತರಿದ್ದರು
ಹೆಬ್ರಿ ಬ್ರಹ್ಮಾವರ ಕಾರ್ಕಳ ತಾಲೂಕು ಮಟ್ಟದ 40ಗಜಗಳ ಈ ಪಂದ್ಯಾಟದಲ್ಲಿ ಆಕರ್ಷಕ ನಗದು ಬಹುಮಾನ ಶಾಶ್ವತ ಫಲಕ ಹಾಗೂ ಅನೇಕ ಕೊಡುಗೆ, ಬಹುಮಾನಗಳು ವಿಜೇತರಿಗೆ ಲಭಿಸಲಿದೆ.
ಬರೆಹ:ಪಿ.ಲಾತವ್ಯ ಆಚಾರ್ಯ ಉಡುಪಿ.

















