ಹಿರಿಯರ ಮಾರ್ಗದರ್ಶನ, ಕಿರಿಯರ ಹೋರಾಟದಿಂದ ಸಮಾಜಕ್ಕೆ ನ್ಯಾಯ ಒದಗಿಸಲು ಸಾಧ್ಯ: ಸಂಸದ ಕೋಟಾ ಶ್ರೀನಿವಾಸ ಪೂಜಾರಿ

ಉಡುಪಿ: ಉಡುಪಿ ವಿಧಾನ ಸಭಾ ಕ್ಷೇತ್ರದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮರಾಟಿ ಸಮುದಾಯದ ಹಿರಿಯ ಪ್ರಭುದ್ಧ ಮುಖಂಡರ ಸಭೆ ಬ್ರಹ್ಮಾವರ ತಾಲೂಕಿನ ನೀಲಾವರ ಗ್ರಾಮದ ಕುಂಜಾಲಿನ ‘ಸ್ನೇಹ ಕುಂಜ’ದಲ್ಲಿ ಇಂದು ನಡೆಯಿತು. ಈ ಸಭೆಯಲ್ಲಿ ಸಮಾಜದ ಅಭಿವೃದ್ಧಿ, ಸಮಸ್ಯೆ ಹಾಗೂ ಪರಿಹಾರಗಳ ವಿಚಾರಗಳನ್ನು ಮುಕ್ತಾವಾಗಿ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಯಶ್ಪಾಲ್ ಎ.ಸುವರ್ಣ ರವರೊಂದಿಗೆ ಮಾತನಾಡಿದರು.

ಸಂಸದರು ಕೇಂದ್ರದ ಯೋಜನೆಯ ಬಗ್ಗೆ ಸಮಗ್ರ ಮಾಹಿತಿಯನ್ನು ತಿಳಿಸಿ, ಮರಾಟಿ ಸಮುದಾಯದ ಅಭಿವೃದ್ಧಿಯಲ್ಲಿ ಸದಾ ಬೆನ್ನಿಗೆ ನಿಂತು ಕೆಲಸ ಮಾಡುವೆ ಎಂದರು. ಶಾಸಕರಾದ ಯಶ್ಪಾಲ್ ಎ ಸುವರ್ಣ ಸರ್ವ ಸಮಾಜದ ಅಭಿವೃದ್ಧಿ ಮಾಡಲೆಂದೆ ತಾವುಗಳು ನನ್ನನ್ನು ಕ್ಷೇತ್ರದ ಶಾಸಕನಾಗಿ ಆಯ್ಕೆ ಮಾಡಿದ್ದೀರಿ.ತಾವು ಇಂದು ಮುಕ್ತವಾಗಿ ನಮ್ಮೊಂದಿಗೆ ಮಾತನಾಡಿದ್ದೀರಿ, ನಿಮ್ಮ ಸಮುದಾಯದ ಅಭಿವೃದ್ಧಿಯಲ್ಲಿ ನಿಮ್ಮೊಂದಿಗೆ ಕೈ ಜೋಡಿಸುವೆ ಎಂದರು.

ಸಭೆಯ ವೇದಿಕೆಯಲ್ಲಿ ಸಮಾಜದ ಮುಖಂಡರಾದ ಕೆ ಟಿ ನಾಯ್ಕ್ ಚಾಂತಾರು, ನರಸಿಂಹ ನಾಯ್ಕ್ ಅಮುಜಿ, ಡಾ ಉದಯ್ ನಾಯ್ಕ್ ಕನ್ನಾರು, ವೀಣಾ ವಿ ನಾಯ್ಕ್ ಚಾಂತಾರು, ಸ್ಥಳೀಯರಾದ ಬಿರ್ತಿ ರಾಜೇಶ್ ಶೆಟ್ಟಿ, ರಾಜೀವ ಕುಲಾಲ್, ದಿನೇಶ್ ಅಮೀನ್, ಕಮಲಾಕ್ಷ ಹೆಬ್ಬಾರ್, ಹರೀಶ್ ಶೆಟ್ಟಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಸಮಾಜದ ಹಲವಾರು ಹಿರಿಯ ಕಿರಿಯ ಮುಖಂಡರು ಚರ್ಚೆಯಲ್ಲಿ ಭಾಗವಹಿಸಿದ್ದರು. ಉಮೇಶ್ ಎ ನಾಯ್ಕ್ ಚೇರ್ಕಾಡಿ ಸ್ವಾಗತಿಸಿದರು, ಬಿ ಟಿ ನಾಯ್ಕ್ ಬಾಯರ್ ಬೆಟ್ಟು ವಂದಿಸಿದರು.