ಉಡುಪಿ: ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಮಣಿಪಾಲ್ ಇದರ ಆಡಳಿತಕ್ಕೆ ಒಳಪಟ್ಟ ಉಡುಪಿ ಎಂಜಿಎಂ.ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ.ಗಾಯತ್ರಿ ಗಿರಿಧರ ಪೈ ನಿಯುಕ್ತಿಗೊಂಡಿದ್ದಾರೆ.
ಮೂಲತಃ ಕಾರ್ಕಳದವರಾದ ಇವರು ತಮ್ಮ ಪದವಿ ಶಿಕ್ಷಣವನ್ನು ಕಾಕ೯ಳ ಭುವನೇಂದ್ರ ಕಾಲೇಜಿನಲ್ಲಿ ಪಡೆದು ಎಂ ಎಸ್ ಸಿ (ಸಸ್ಯ ಶಾಸ್ತ್ರ) ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿ.ವಿ.ಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇಗ೯ಡೆಯಾಗುವುದರೊಂದಿಗೆ ಗೇೂಲ್ಡ್ ಮೆಡಲ್ ಪುರಸ್ಕೃತರು. ಸಸ್ಯ ಶಾಸ್ತ್ರ ವಿಷಯದ ಮೇಲೆ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿಗಳಿಸಿರುತ್ತಾರೆ.
ಶೈಕ್ಷಣಿಕ ಕ್ಷೇತ್ರದಲ್ಲಿ 33 ವರುಷಗಳ ಅನುಭವ ಪಡೆದಿರುವ ಇವರು ಕುಂದಾಪುರ ಭಂಡಾರ್ಕರ್ ಕಾಲೇಜು ಕಾಕ೯ಳ ಭುವನೇಂದ್ರ ಕಾಲೇಜು ಉಡುಪಿ ಎಂಜಿಎಂ.ಕಾಲೇಜಿನಲ್ಲಿ ಸಸ್ಯ ಶಾಸ್ತ್ರ ವಿಭಾಗದಲ್ಲಿ ಮುಖ್ಯಸ್ಥರಾಗಿ ಸುದೀರ್ಘ ಕಾಲ ಅನುಭವ ಪಡೆದಿರುತ್ತಾರೆ. ಅಕಾಡೆಮಿಯ ಆಫ್ ಜನರಲ್ ಎಜುಕೇಷನ್ ಆಡಳಿತ ಮಂಡಳಿ ಡಾ.ಗಾಯತ್ರಿ ಗಿರಿಧರ ಅವರನ್ನು ಎಂಜಿಎಂ.ಕಾಲೇಜಿನ ನೂತನ ಪ್ರಾಂಶುಪಾಲರಾಗಿ ನಿಯುಕ್ತಿಗೊಳಿಸಿದ್ದಾರೆ.

















