ಕಾರ್ಕಳ: ಕಾಬೆಟ್ಟು ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಯ ಸದಸ್ಯರ ಅನಧಿಕೃತ ಆಯ್ಕೆಯ ಕುರಿತು ಇಂದು ವಿವಿಧ ದಲಿತ ಸಂಘಟನೆಗಳ ನಾಯಕರುಗಳಿಂದ ತಹಶೀಲ್ದಾರರಿಗೆ ಮನವಿ ನೀಡಲಾಯಿತು.
ಮನವಿಯಲ್ಲಿ ನಿರ್ವಹಣಾ ಸಮಿತಿಯ ಸದಸ್ಯರನ್ನು ಅನರ್ಹಗೊಳಿಸಿ ಪುನರ್ ಆಯ್ಕೆ ಮಾಡುವಂತೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಂಘ(ರಿ.)ದ ಗೋವರ್ಧನ್ ರಾಣೆ, ಕರ್ನಾಟಕ ಭೀಮ್ ಸೇನೆ (ರಿ.) ಇದರ ಉಡುಪಿ ಜಿಲ್ಲಾಧ್ಯಕ್ಷರಾದ ಸುಧಾಕರ್ ದಾನಶಾಲೆ, ಡಾ.ಬಿ.ಆರ್.ಅಂಬೇಡ್ಕರ್ ಯುವ ವೇದಿಕೆ(ರಿ.)ಯ ತಾಲೂಕು ಅಧ್ಯಕ್ಷರಾದ ಹರೀಶ್ ಬಜಗೋಳಿ, ಸುಹಾಸ್ ಮುಡಾರು, ರಮೇಶ್ ಜರಿಗುಡ್ಡೆ, ಸುನೀತಾ ಅಂಡಾರು, ಶ್ರೀನಿವಾಸ್ ಕಾರ್ಲ ಉಪಸ್ಥಿತರಿದ್ದರು.

















