ಬೆಂಗಳೂರು/ಕಾರ್ಕಳ: ಕಾರ್ಕಳ ಯಕ್ಷರಂಗಾಯಣದ ಹೆಸರನ್ನು ಕರಾವಳಿ ರಂಗಾಯಣ ಎಂದು ಬದಲಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.ಕರಾವಳಿಯ ಅಸ್ಮಿತೆಯನ್ನು ಕಲೆ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಹೆಸರು ಸೂಕ್ತವೆನ್ನಿಸಿದೆ. ಇಡೀ ಕರಾವಳಿಗೆ ನ್ಯಾಯ ಕೊಡುವ ಹೆಸರು ಇದಾಗಿದ್ದು ಕರಾವಳಿಗರಿಂದ ಹೊಸ ಹೆಸರಿಗೆ ಪ್ರಶಂಸೆ ವ್ಯಕ್ತವಾಗಿದೆ. ಕರಾವಳಿಯಲ್ಲಿ ರಂಗಭೂಮಿಗೆ ದೊಡ್ಡ ಪರಂಪರೆ ಇದೆ.
ತುಳು,ಕನ್ನಡ,ಕೊಂಕಣಿ,ಮೊದಲಾದ ಭಾಷೆಗಳ ರಂಗಭೂಮಿಯನ್ನು ಉತ್ತೇಜಿಸಲು ಕಾರ್ಕಳದ ಕರಾವಳಿ ರಂಗಾಯಣ ವೇದಿಕೆಯಾಗಲಿದೆ ಎನ್ನುವ ಮಾತುಗಳು ರಂಗಭೂಮಿ ವಲಯದಲ್ಲಿ ಕೇಳಿಬರುತ್ತಿದೆ.

















