ಮಣಿಪಾಲ: ಮಣಿಪಾಲದ ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಕಾಯಚಿಕಿತ್ಸಾ ಸ್ನಾತಕೋತ್ತರ ವಿಭಾಗದ ವತಿಯಿಂದ ಜೂನ್ 22 ರಿಂದ 29ರವರೆಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಆಸ್ತಮಾ ರೋಗದ ಉಚಿತ ತಪಾಸಣೆ, ಪರೀಕ್ಷೆ ಹಾಗೂ ಚಿಕಿತ್ಸಾ ಶಿಬಿರವು ನಡೆಯಲಿರುವುದು.
ಸುಮಾರು 20 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದೊಳಗಿನ ಆಸ್ತಮಾ ರೋಗಿಗಳು ಹಾಗೂ ಅಲರ್ಜಿಯಿಂದಾಗಿ ಆಗಾಗ್ಗೆ ಕೆಮ್ಮು, ವೀಸಿಂಗ್ (ಉಸಿರಾಟದಲ್ಲಿ ಶಬ್ದ) ಅಥವಾ ಉಸಿರಾಟದ ತೊಂದರೆ ಅನುಭವಿಸುವವರು.
ಧೂಳಿನಿಂದ ಉಂಟಾಗುವ ಬ್ರಾಂಕಿಯಲ್ ಕೆರಳಿಕೆಯಿಂದ ಬಳಲುತ್ತಿರುವವರು, ಉಸಿರಾಟದ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಸಹಜವಾಗಿ ಹೆಚ್ಚಿಸಿಕೊಳ್ಳಲು ಬಯಸುವವರು ಈ ಉಚಿತ ಆಯುರ್ವೇದ ಚಿಕಿತ್ಸೆಯ ಪ್ರಯೋಜನ ಪಡೆಯಬಹುದು.
ಉತ್ತಮ ತಪಾಸಣೆಗಾಗಿ ತಮ್ಮ ಹಿಂದಿನ ಎಲ್ಲಾ ವೈದ್ಯಕೀಯ ದಾಖಲೆಗಳು ಮತ್ತು ವರದಿಗಳನ್ನು ಜೊತೆಗೆ ತರಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 8123403233 ಸಂಪರ್ಕಿಸಿ.

















