ಉಡುಪಿ: ಸವ್ಯ ಸಾಚಿ ಶಿಶು ಮಂದಿರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಶ್ರೀಮತಿ ಪ್ರಸಾದಿನಿ ಹೆಗ್ಡೆ ಯವರು ಸರ್ವರನ್ನು ಸ್ವಾಗತಿಸಿದರು.
ಶಿಶು ಮಂದಿರ ಅಧ್ಯಕ್ಷರಾದ ಕೃಷ್ಣ ಮೂರ್ತಿ ಪ್ರಭು ರವರ ಅದ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಪತಂಜಲಿ ಯೋಗ ಶಿಕ್ಷಣ ಸಮಿತಿ ಉಡುಪಿ ಇದರ ಜಿಲ್ಲಾ ಪ್ರಮುಖರಾದ ಶ್ರೀಮತಿ ವಾಣಿ ಮತ್ತು ಶ್ರೀಮತಿ ರೇಖಾ ರವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟನೆ ಮಾಡಿದರು.

ವೇದಿಕೆಯಲ್ಲಿ ಸತ್ಯಾನಂದ ನಾಯಕ್ ಆತ್ರಾಡಿ, ಬಾಲಕೃಷ್ಣ ಹೆಗ್ಡೆ ಬೀರ್ಬೇಟ್ಟು, ಶ್ರೀಮತಿ ಉಮಾ ಮಹೇಶ್ವರಿ ಉಪಸ್ಥಿತರಿದ್ದರು.

ಶಿಶು ಮಂದಿರದ ಮಾತಾಜೀ ಶ್ರೀಮತಿ ಅನಿತಾರವರು ದೇಶ ಭಕ್ತಿಯ ಗೀತೆಯನ್ನು ಹೇಳಿದರು. ಯೋಗ ಶಿಕ್ಷಕಿಯರಾದ ಶ್ರೀಮತಿ ವಾಣಿ ಯವರು ಎಲ್ಲರಿಗೂ ಯೋಗಾಭ್ಯಾಸ ಮಾಡಿದರು. ಇನ್ನೊರ್ವ ಯೋಗ ಶಿಕ್ಷಕಿ ಶ್ರೀಮತಿ ರೇಖಾರವರು ಪ್ರತಾಕ್ಷಿತೆಯಲ್ಲಿ ಸಹಕರಿಸಿದರು.

ಶ್ರೀ ದೇವೇಂದ್ರ ಕಾಮತ್, ಪಾದೆಕಲ್ ವಿಷ್ಣು ಭಟ್ ಮತ್ತು ಪೋಷಕರು, ತಾಯಂದಿರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


















