ಉಡುಪಿ: ಪಟ್ಲ ಯು. ಎಸ್. ನಾಯಕ್ ಪ್ರೌಢ ಶಾಲೆಯಲ್ಲಿ’ ಅಂತರಾಷ್ಟ್ರೀಯ ಯೋಗ ದಿನಾಚರಣೆ’

ಉಡುಪಿ: ಪಟ್ಲ ಯು ಎಸ್ ನಾಯಕ್ ಪ್ರೌಢ ಶಾಲೆಯಲ್ಲಿ’ ಅಂತರಾಷ್ಟೀಯ ಯೋಗ ದಿನಾಚರಣೆ’ ಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.

ವಾರಣಾಸಿ ಯೋಗ ಕೇಂದ್ರದ ಯೋಗ ಗುರುಗಳಾದ ಶ್ರೀ ಪ್ರಕಾಶಾನಂದ ಗುರುಜಿಯವರು “ಸದೃಡವಾದ ದೖಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ದಿವ್ಯೌಷಧವಾಗಬಲ್ಲದು” ಎಂದು ಯೋಗದ ಮಹತ್ವದ ಬಗ್ಗೆ ತಿಳಿಸಿ ಒಂದು ಗಂಟೆ ಯೋಗಾಭ್ಯಾಸ ಮಾಡಿಸಿದರು.

ಈ ಸಂದರ್ಭದಲ್ಲಿ ರೂರಲ್ ಎಜುಕೇಶನ್ ಸೊಸೖಟಿ(ರಿ,) ಪಟ್ಲ. ಇದರ ಅಧ್ಯಕ್ಷರಾದ ಪೆರ್ಣಂಕಿಲ ಶ್ರೀಶ ನಾಯಕ್, ಆಡಳಿತ ಮಂಡಳಿಯ ಡಾ. ಕೆ ನಾರಾಯಣ ಶೆಣೈ, ಶ್ರೀ ಜಯರಾಜ್ ಶೆಟ್ಟಿ ಹಾಗೂ ಸಮೂಹ ವಿದ್ಯಾ ಸಂಸ್ಥೆಗಳ ಗುರೂಜಿ ಮಾತಾಜಿಯವರು ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯರಾದ ಶಾಂತಪ್ಪ ಮೂಲಂಗಿ ಎಲ್ಲರನ್ನು ಸ್ವಾಗತಿಸಿ, ಯೋಗ ಪ್ರತಿಜ್ಞಾವಿಧಿ ಬೋಧಿಸಿದರು. ಯೋಗ ಗುರುಗಳಿಗೆ ಗುರು ಕಾಣಿಕೆ ನೀಡಿ ಬೀಳ್ಕೊಡಲಾಯಿತು.