ಟೆಂಡರ್ ಆಹ್ವಾನ

ಉಡುಪಿ: ಕಾರ್ಕಳದ ನ್ಯಾಯಾಲಯಗಳ ಸಂಕೀರ್ಣದಲ್ಲಿ ಕ್ಯಾಂಟೀನ್ ಅನ್ನು ನಡೆಸಲು ಅನುಭವವುಳ್ಳ ಹೋಟೆಲ್ ಉದ್ಯಮ / ಹೋಟೆಲ್ ಮಾಲೀಕರಿಂದ ಶರ್ತಬದ್ಧ ಟೆಂಡರ್ ಆಹ್ವಾನಿಸಲಾಗಿದೆ.

ಟೆಂಡರ್ ನಲ್ಲಿ ಬಾಗವಹಿಸಲಿಚ್ಛಿಸುವ ಟೆಂಡರ್‌ದಾರರು ಟೆಂಡರ್ ನೋಟಿಫಿಕೇಶನ್ ನಮೂನೆಗಳನ್ನು ಕಾರ್ಕಳದ ಹಿರಿಯ ಸಿವಿಲ್ ನ್ಯಾಯಾಲಯದ ಕಚೇರಿಯಿಂದ ಜೂನ್ 23 ರಿಂದ ಜುಲೈ 14 ರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ರ ವರೆಗೆ ಪಡೆಯಬಹುದಾಗಿದೆ.

ಮೊಹರು ಮಾಡಿದ ಲಕೋಟೆಯೊಂದಿಗೆ ಟೆಂಡರ್ ಸಲ್ಲಿಸಲು ಜುಲೈ 15 ಕೊನೆಯ ದಿನ. ಜು.16 ರಂದು ಸಂಜೆ 5 ಗಂಟೆಗೆ ಟೆಂಡರ್ ತೆರೆಯಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿಯವರ ಕಚೇರಿ, ಕಾರ್ಕಳ ಅನ್ನು ಕಚೇರಿ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.