ತಂಬಾಕು ನಿಯಂತ್ರಣ ತನಿಖಾ ದಳದಿಂದ ದಾಳಿ: ದಂಡ ವಸೂಲಿ

ಉಡುಪಿ: ಕಾಪು ತಾಲೂಕಿನಲ್ಲಿ ಕೋಟ್ಪಾ 2003 ಕಾಯಿದೆಯನ್ನು ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಉಡುಪಿ ತಾಲೂಕು ಆರೋಗ್ಯಾಧಿಕಾರಿಯವರ ನೇತೃತ್ವದಲ್ಲಿ ಗುರುವಾರ ಪಡುಬಿದ್ರಿ ಪೇಟೆ ಹಾಗೂ ಬಸ್‌ಸ್ಟಾಂಡ್‌ಗಳಲ್ಲಿ ತಂಬಾಕು ಮಾರಾಟದ ಅಂಗಡಿಗಳು, ಹೋಟೆಲ್‌ಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿ ಸೆಕ್ಷನ್ 4, 6(ಎ) ಮತ್ತು 6(ಬಿ) ಅಡಿಯಲ್ಲಿ ಒಟ್ಟು 44 ಪ್ರಕರಣಗಳನ್ನು ದಾಖಲಿಸಿ, ರೂ. 17,000 ದಂಡ ವಸೂಲಿ ಮಾಡಲಾಯಿತು. ಅದರಂತೆ ಸೆಕ್ಷನ್ 4, 6(ಎ) ಮತ್ತು 6 (ಬಿ) ನಾಮ ಫಲಕಗಳನ್ನು ಸದರಿ ದಾಳಿಯಲ್ಲಿ ವಿತರಿಸಿ 2003 […]
ಜಿಲ್ಲಾ ರೆಡ್‌ಕ್ರಾಸ್ ಸಭಾಪತಿಗಳಾಗಿ ಡಾ..ಅಶೋಕ್ ಕುಮಾರ್ ಆಯ್ಕೆ

ಉಡುಪಿ: ಇತ್ತೀಚೆಗೆ ರೆಡ್‌ಕ್ರಾಸ್ ಭವನದಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಮುಂದಿನ ವಾರ್ಷಿಕ ಮಹಾಸಭೆಯವರೆಗೆ ಜಿಲ್ಲಾ ರೆಡ್‌ಕ್ರಾಸ್ ಸಭಾಪತಿಗಳಾಗಿ ವೈದ್ಯರಾದ ಡಾ. ಅಶೋಕ್ ಕುಮಾರ್ ವೈ.ಜಿ. ಅವರನ್ನು ನೇಮಕ ಮಾಡಲಾಯಿತು. ಕರ್ನಾಟಕ ರಾಜ್ಯ ರೆಡ್‌ಕ್ರಾಸ್‌ನ ಸಭಾಪತಿಗಳಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಜಿಲ್ಲಾ ಸಭಾಪತಿ ಸ್ಥಾನಕ್ಕೆ ಬಸ್ರೂರು ರಾಜೀವ್ ಶೆಟ್ಟಿಯವರು ಸಭಾಪತಿ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಅಂಗೀಕರಿಸಿದ ಆಡಳಿತ ಮಂಡಳಿಯು ಈ ನೇಮಕ ಮಾಡಿದೆ. ಡಾ.ಅಶೋಕ್ ಕುಮಾರ್ ವೈ.ಜಿಯವರು ಬಸ್ರೂರು ರಾಜೀವ್ ಶೆಟ್ಟಿ ಅವರಿಂದ ಸಭಾಪತಿಯಾಗಿ ಅಧಿಕಾರ ಸ್ವೀಕರಿಸಿದರು. ಅವರು ಕಳೆದ […]
ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಅರಿವು ಕಾರ್ಯಕ್ರಮ

ಉಡುಪಿ: ಉಡುಪಿ ನಗರಸಭೆ ಹಾಗೂ ಆರೋಗ್ಯ ಇಲಾಖೆ ಇವರ ಜಂಟಿ ಆಶ್ರಯದಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಸಾಂಕ್ರಮಿಕ ರೋಗಗಳನ್ನು ನಿಯಂತ್ರಣ ಮಾಡಲು ಸೂಕ್ತ ಕ್ರಮ ವಹಿಸುವ ಕುರಿತು ಉಡುಪಿ ನಗರಸಭಾ ವ್ಯಾಪ್ತಿಯ ಬಿಲ್ಡರ್ಸ್ ಮತ್ತು ಕಾರ್ಮಿಕರಿಗೆ ಶೆಲ್ಟರ್ ಒದಗಿಸಿದ ಮಾಲೀಕರಿಗೆ ಅರಿವು ಮೂಡಿಸುವ ಕಾರ್ಯಗಾರವು ಮಂಗಳವಾರ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಗಾರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ್ ಹುಬ್ಬಳ್ಳಿ ಅವರು ಮಳೆಗಾಲದ ಸಂದರ್ಭದಲ್ಲಿ ಸಾಂಕ್ರಮಿಕ ರೋಗಗಳನ್ನು ನಿಯಂತ್ರಣ ಮಾಡಲು […]
ತೆರೆಗೆ ಬರುತ್ತಿದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಜೀವನಗಾಥೆ, ಅಮೀರ್ ಖಾನ್ ನಿರ್ಮಾಣದಲ್ಲಿ ಮೂಡಿಬರಲಿದೆ ರಾಷ್ಟ್ರಪತಿ ಸಾಕ್ಷ್ಯಚಿತ್ರ!

ಭಾರತದ ಮೊದಲ ಆದಿವಾಸಿ ಮಹಿಳಾ ರಾಷ್ಟ್ರಪತಿಯಾದ ದ್ರೌಪದಿ ಮುರ್ಮು Droupadi Murmu ಅವರ ಜೀವನ ಪಯಣ ಇದೀಗ ಸಾಕ್ಷ್ಯಚಿತ್ರವಾಗಿ ಮೂಡಿಬರಲಿದೆ. ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಖ್ಯಾತ ಬಾಲಿವುಡ್ ನಟ ಅಮೀರ್ ಖಾನ್ Aamir Khan ನಿರ್ಮಿಸಲಿದ್ದಾರೆ. ಆಮೀರ್ ಖಾನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿರುವ ಈ ಸಾಕ್ಷ್ಯಚಿತ್ರಕ್ಕೆ ಲೇಖಕಿ ಹಾಗೂ ನಿರ್ದೇಶಕಿ ಸ್ವಾತಿ ಚಕ್ರವರ್ತಿ ಭಟ್ಕಲ್ ನಿರ್ದೇಶನ ಮಾಡಲಿದ್ದಾರೆ. ಒಡಿಶಾದ ಒಂದು ಸಣ್ಣ ಹಳ್ಳಿಯಲ್ಲಿ ಬೆಳೆದ ಬಾಲಕಿಯೊಬ್ಬಳು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ […]
ಸಾರ್ವಜನಿಕ ಅಹವಾಲುಗಳ ಪರಿಹಾರಕ್ಕೆ ಪ್ರತ್ಯೇಕ ಸಚಿವಾಲಯದ ಭರವಸೆ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್,ರಾಜ್ಯದಲ್ಲಿ ಇನ್ನೂ ಏನೆಲ್ಲಾ ಬದಲಾವಣೆ?

ಬೆಂಗಳೂರು: ಸಾರ್ವಜನಿಕರ ಅಹವಾಲುಗಳ ಪರಿಹಾರಕ್ಕೆ ಪ್ರತ್ಯೇಕ ಸಚಿವಾಲಯ ರಚನೆ ಮಾಡಲಾಗುತ್ತಿದ್ದು, ಅದಕ್ಕೆ ಸಚಿವರನ್ನು ಕೂಡ ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, ‘ಇದು ಕೇವಲ ಅರ್ಜಿಗಳನ್ನು ಸಾಗಿಸುವ ಪೋಸ್ಟ್ ಮ್ಯಾನ್ ಕೆಲಸವಲ್ಲ. ಜನರಿಗೆ ನ್ಯಾಯ ದೊರಕಿಸುವ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಲಿದೆ’ ಎಂದು ಹೇಳಿದರು. ಈ ಪ್ರಸ್ತಾವಿತ ಸಚಿವಾಲಯವು ಅಹವಾಲು ಪರಿಹಾರ ಕಾರ್ಯಗಳನ್ನು ಸಂಯೋಜಿಸಿ, ನಾಗರಿಕರು ಹಾಗೂ ಆಡಳಿತದ ನಡುವೆ ಉತ್ತಮ ಸಂವಹನವನ್ನು ಖಚಿತಪಡಿಸಲಿದೆ. 224 ಕ್ಷೇತ್ರಗಳಲ್ಲಿ ಜನಸ್ಪಂದನಾ ಸಭೆ […]