ಪುತ್ತೂರು: ರಜತಪೀಠಪುರ ಪುತ್ತೂರಿನ ಆರಾಧ್ಯ ದೇವರಾದ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಪವಿತ್ರ ಸಾನ್ನಿಧ್ಯದಲ್ಲಿ, ಸಪ್ತಗಿರಿ ಜ್ಞಾನಹಸ್ತದ ನೇತೃತ್ವದಲ್ಲಿ ಆಡಳಿತ ಮಂಡಳಿಯ ಸಹಯೋಗದೊಂದಿಗೆ 2026ರ ಜೂನ್ 21ರಿಂದ 27ರವರೆಗೆ ಶ್ರೀಮದ್ ಭಾಗವತ ಸಪ್ತಾಹ ಪ್ರವಚನ ಕಾರ್ಯಕ್ರಮವು ಭಕ್ತಿಭಾವದಿಂದ ನಡೆಯಲಿದೆ.
ಏಳು ದಿನಗಳ ಕಾಲ ನಡೆಯುವ ಈ ಆಧ್ಯಾತ್ಮಿಕ ಮಹೋತ್ಸವದಲ್ಲಿ ಖ್ಯಾತ ವಿದ್ವಾಂಸರಾದ ಶ್ರೀಶ ಭಟ್ ಮುದರಂಗಡಿ ಹಾಗೂ ಕುತ್ಪಾಡಿ ಕೃಷ್ಣ ರಾಜ್ ಆಚಾರ್ಯ ಅವರಿಂದ ಶ್ರೀಮದ್ ಭಾಗವತ ಮಹಾಪುರಾಣದ ಪ್ರವಚನ ನಡೆಯಲಿದ್ದು, ಭಕ್ತರು ಭಾಗವಹಿಸಿ ಆಧ್ಯಾತ್ಮಿಕ ಜ್ಞಾನ ಹಾಗೂ ಭಕ್ತಿಯ ಅಮೃತವನ್ನು ಸವಿಯುವ ಅವಕಾಶ ದೊರೆಯಲಿದೆ.
ಕಾರ್ಯಕ್ರಮದ ಸಮಾರೋಪ ದಿನವಾದ ಜೂನ್ 27ರಂದು “ಲಕ್ಷ ತುಳಸಿ ಅರ್ಚನೆ” ವಿಶೇಷವಾಗಿ ನಡೆಯಲಿದೆ.
ಈ ಪುಣ್ಯಮಯ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಕುಟುಂಬ ಸಮೇತರಾಗಿ ಭಾಗವಹಿಸಿ, ಶ್ರೀ ಲಕ್ಷ್ಮೀ ವೆಂಕಟೇಶ ದೇವರ ಕೃಪೆ ಮತ್ತು ಆಶೀರ್ವಾದಕ್ಕೆ ಪಾತ್ರರಾಗುವಂತೆ ಸಪ್ತಗಿರಿ ಜ್ಞಾನಹಸ್ತ ಪ್ರಕಟಣೆಯಲ್ಲಿ ಮನವಿ ಮಾಡಿದೆ.
ಸ್ಥಳ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ, ಪುತ್ತೂರು
ದಿನಾಂಕ: 21-06-2026 ರಿಂದ 27-06-2026
ಸಮಯ: ಸಂಜೆ 05:00 ರಿಂದ 07:30.

















