ತ್ರಿಶಾ ಪದವಿ ಪೂರ್ವ ಕಾಲೇಜು, ಓರಿಯೆಂಟೇಷನ್ ಕಾರ್ಯಕ್ರಮ

ಮಂಗಳೂರು : ತ್ರಿಶಾ ಪದವಿ ಪೂರ್ವ ಕಾಲೇಜಿನ ವತಿಯಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್
ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ತ್ರಿಶಾ ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥಾಪಕರು ಸಿ.ಎ ಗೋಪಾಲಕೃಷ್ಣ ಭಟ್
ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಸಾಧನೆಗೆ ಮೂರು ಸೂತ್ರ, ಸತತ ಅಭ್ಯಾಸ, ಅಡಚಣೆಗಳ ನಿವಾರಣೆ, ಗಮನ ಕೇಂದ್ರೀಕರಿಸುವುದು ಆಗಿದೆ. ನೀರಿನಲ್ಲಿ ಸ್ನಾನ ಮಾಡಿದವರು ಬರೀ ಬಟ್ಟೆ ಮಾತ್ರ ಬದಲಾಯಿಸುತ್ತಾರೆ ಆದರೆ ಬೆವರಿನಲ್ಲಿ ಸ್ನಾನ ಮಾಡಿದವರು ಇತಿಹಾಸವನ್ನು ಬದಲಾಯಿಸುತ್ತಾರೆ. ಮೇಲಿನ ಮೂರು ಸಿದ್ದ ಸೂತ್ರಗಳನ್ನು ಅಳವಡಿಸಿಕೊಂಡ ಸಾಧನೆಯ ಶಿಖರವನ್ನೇರಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಪಿಯುಸಿ ಶಿಕ್ಷಣದ ಅಗತ್ಯತೆಗಳು ಹಾಗೂ ವಿದ್ಯಾರ್ಥಿಗಳು ಸಾಗಬೇಕಾದ ಹಾದಿಯನ್ನು ಕುರಿತಂತೆ ಉಪನ್ಯಾಸವನ್ನು ನೀಡಿದರು.
ವೇದಿಕೆಯಲ್ಲಿ ಗೌರವಾನ್ವಿತ ಆಹ್ವಾನಿತರಾಗಿ ಕಾಲೇಜಿನ ಶೈಕ್ಷಣಿಕ ಆಡಳಿತಗಾರರಾದ ಡಾ.ನಾರಾಯಣ ಕಾಯರ್ ಕಟ್ಟೆಯರು
ಹಾಗೂ ತ್ರಿಶಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರದ ಶ್ರೀಮತಿ ಯಶಸ್ವಿನಿ ಯಶ್ಪಾಲ್ ರವರು ಉಪಸ್ಥಿತರಿದ್ದರು. ಕಾಲೇಜಿನ ನಿಯಮ ಮತ್ತು ನಿಬಂಧನೆಗಳನ್ನು ಕುರಿತಂತೆ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.
ವಾಣಿಜ್ಯಶಾಸ್ತ್ರದ ಅಧ್ಯಾಪಕಿ ಶ್ರೀಮತಿ ಶೈನಿ ವಿ ಪಿ ಸ್ವಾಗತಿಸಿದರು, ವಾಣಿಜ್ಯಶಾಸ್ತ್ರದ ಅಧ್ಯಾಪಕಿ ಶ್ರೀಮತಿ ವಿದ್ಯಾಲಕ್ಷ್ಮಿ
ವಂದಿಸಿದರು. ಕಾರ್ಯಕ್ರಮವನ್ನು ಅರ್ಥಶಾಸ್ತ್ರದ ಅಧ್ಯಾಪಕಿ ಶ್ರೀಮತಿ ಶಿಲ್ಪ ಶೆಟ್ಟಿ ಅಚ್ಚುಕಟ್ಟಾಗಿ ನಿರೂಪಿಸಿದರು.