ಮಣಿಪಾಲದಲ್ಲಿ MSME ಸಾಲಗಳ ಕುರಿತು ವಿಶೇಷ ಸೆಮಿನಾರ್: ಉದ್ಯಮ ಆರಂಭಿಸುವ ಆಸಕ್ತರಿಗೆ ಇದು ಅದ್ಬುತ ಅವಕಾಶ

ಮಣಿಪಾಲ: ಸ್ವಂತ ಉದ್ಯಮ ಆರಂಭಿಸುವ ಕನಸು ಹೊಂದಿರುವ ಯುವಕರು, ಮಹಿಳೆಯರು ಹಾಗೂ ಉದ್ಯಮಿಗಳಿಗಾಗಿ MSME (Micro, Small and Medium Enterprises) ಸಾಲಗಳ ಕುರಿತು ವಿಶೇಷ ಸೆಮಿನಾರ್ ನ್ನು ಜೂನ್ 12, 2026 ರಂದು ಬೆಳಿಗ್ಗೆ 10 ಗಂಟೆಗೆ ಮಣಿಪಾಲದ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಕ್ಯಾಂಪಸ್‌ನಲ್ಲಿರುವ ಡ್ರೀಮ್‌ಝೋನ್-ಎಂಎಸ್‌ಡಿಸಿ ಕೇಂದ್ರದಲ್ಲಿ ಆಯೋಜಿಸಲಾಗಿದೆ.

‘Start Your Dream Business with MSME Loans’ ಎಂಬ ಶೀರ್ಷಿಕೆಯಡಿ ಈ ಕಾರ್ಯಕ್ರಮ ನಡೆಯಲಿದೆ.

ಈ ಸೆಮಿನಾರ್‌ನಲ್ಲಿ ಬೊಟಿಕ್ ಹಾಗೂ ಫ್ಯಾಷನ್ ಸ್ಟೋರ್, ಟೈಲರಿಂಗ್ ಯುನಿಟ್, ಉಡುಪು ವ್ಯಾಪಾರ, ಬ್ಯೂಟಿ ಸಲೂನ್, ಹ್ಯಾಂಡಿಕ್ರಾಫ್ಟ್ ಉದ್ಯಮ ಹಾಗೂ ಮನೆಯಿಂದಲೇ ನಡೆಸಬಹುದಾದ ವಿವಿಧ ಉದ್ಯಮಗಳಿಗೆ MSME ಸಾಲ ಸೌಲಭ್ಯಗಳನ್ನು ಹೇಗೆ ಪಡೆಯಬಹುದು ಎಂಬ ಕುರಿತು ಮಾಹಿತಿ ನೀಡಲಾಗುತ್ತದೆ.

ಆರ್ಥಿಕ ಸಾಕ್ಷರತೆ ಬಗ್ಗೆ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು, ವೃತ್ತಿಪರರು, ಉದ್ಯಮ ಆರಂಭಿಸಲು ಬಯಸುವವರು ಹಾಗೂ ಈಗಾಗಲೇ MSME ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಕರ್ನಾಟಕ ಬ್ಯಾಂಕ್‌ನ ಸಹಯೋಗದಲ್ಲಿ ನಡೆಯಲಿರುವ ಈ ಸೆಮಿನಾರ್‌ನಲ್ಲಿ ಉದ್ಯಮ ಆರಂಭಿಸಲು ಅಗತ್ಯವಿರುವ ಸಾಲ ಯೋಜನೆಗಳು, ಅರ್ಜಿ ಪ್ರಕ್ರಿಯೆ ಹಾಗೂ ಹಣಕಾಸು ನಿರ್ವಹಣೆ ಕುರಿತು ತಜ್ಞರು ಮಾರ್ಗದರ್ಶನ ನೀಡಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 81231 63932 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. Registrationಗೆ ಆಸಕ್ತರು ಮುಂಗಡವಾಗಿ ಹೆಸರು ನೋಂದಾಯಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.