ಮಣಿಪಾಲದ MSDC ಒರೇನ್ ಇಂಟರ್‌ನ್ಯಾಷನಲ್ ಸಂಸ್ಥೆಯಲ್ಲಿ ಜೂ.11 ರಂದು ‘ರೀಗಲ್ ಬ್ರೈಡ್ ಮಾದರಿ ಆಯ್ಕೆ ಕಾರ್ಯಕ್ರಮ: ಆಸಕ್ತರು ನೊಂದಾಯಿಸಿ

ಮಣಿಪಾಲ: ವಧು ಅಲಂಕಾರ ಮತ್ತು ಫ್ಯಾಷನ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಯುವತಿಯರಿಗೆ ವಿಶೇಷ ಅವಕಾಶ ಕಲ್ಪಿಸುವ ಉದ್ದೇಶದಿಂದ ‘ರೀಗಲ್ ಬ್ರೈಡ್’ (Regal Bride) ಮಾದರಿ ಆಯ್ಕೆ ಕಾರ್ಯಕ್ರಮವನ್ನು MSDC ಓರೆನ್ ಇಂಟರ್ ನ್ಯಾಷನಲ್ ಜೂನ್ 11ರಂದು ಆಯೋಜಿಸಿದೆ.

ಮಣಿಪಾಲದ ಎಂಎಸ್‌ಡಿಸಿ ಒರೇನ್ ಇಂಟರ್‌ನ್ಯಾಷನಲ್ ಸಂಸ್ಥೆಯಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30ರವರೆಗೆ ಈ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಬ್ರೈಡಲ್ ಲುಕ್‌ಗಾಗಿ ಸೂಕ್ತ ಮಾದರಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ಸೌಂದರ್ಯ, ಆತ್ಮವಿಶ್ವಾಸ ಮತ್ತು ರ್ಯಾಂಪ್ ಪ್ರೆಸೆನ್ಸ್ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.

ಫ್ಯಾಷನ್ ಹಾಗೂ ಬ್ಯೂಟಿ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಈ ಕಾರ್ಯಕ್ರಮ ಉತ್ತಮ ವೇದಿಕೆಯಾಗಲಿದೆ. ಹೆಚ್ಚಿನ ಮಾಹಿತಿಗಾಗಿ 8123165068 ಸಂಖ್ಯೆಯನ್ನು ಸಂಪರ್ಕಿಸಿ