ಜೂ.12, ನೇರ ಸಂದರ್ಶನ

ಉಡುಪಿ: ನಗರದ ಮಣಿಪಾಲದ ಮನೋಹರ್ ಭವನ್ ಹೋಟೆಲ್ ಮುಂಭಾಗದ ಮಣಿಪಾಲ್ ಪೇಮೆಂಟ್ ಐಡೆಂಟಿಟಿ ಸೊಲ್ಯೂಷನ್ಸ್ ಲಿಮಿಟೆಡ್ ಇಲ್ಲಿ ಜೂನ್ 12 ರಂದು ಬೆಳಗ್ಗೆ 10.30 ಕ್ಕೆ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ. ಡಿಪ್ಲೋಮಾ, ಐ.ಟಿ.ಐ. ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ಪ್ರತಿಯೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ: […]
ಹೆಬ್ರಿ: ಅಂದರ್ ಬಾಹರ್ ಇಸ್ಪೀಟ್ ಜೂಜು ಅಡ್ಡೆಗೆ ಪೊಲೀಸರ ದಾಳಿ; 7 ಮಂದಿಯ ಬಂಧನ

ಉಡುಪಿ: ಹೆಬ್ರಿ ಸಮೀಪದ ಹೊಸೂರು ಎಂಬಲ್ಲಿ ಇಸ್ಪೀಟ್ ಜೂಜಾಟ ನಡೆಸುತ್ತಿದ್ದ ಆರೋಪದಲ್ಲಿ ಏಳು ಮಂದಿಯನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ. ಜೂಜಾಟ ನಡೆಯುತ್ತಿರುವ ಕುರಿತು ದೊರೆತ ಮಾಹಿತಿಯ ಮೇರೆಗೆ ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ಕಾರ್ಕಳ ವೃತ್ತ ನಿರೀಕ್ಷಕ ಸಂದೀಪ್ ಜಿ.ಎಸ್. ನೇತೃತ್ವದ ತಂಡ ದಾಳಿ ನಡೆಸಿತು. ಈ ವೇಳೆ ಚಪ್ಪರ ಹಾಗೂ ಟಾರ್ಪಾಲ್ ಅಡಿ ಟೇಬಲ್ ಸುತ್ತ ಕುಳಿತು ಹಣ ಪಣಕ್ಕೊಡ್ಡಿ ‘ಅಂದರ್-ಬಾಹರ್’ ಜೂಜಾಟ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ದಾಳಿಯಲ್ಲಿ ವಿಜೇಶ್ ಕುಮಾರ್ […]
ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ. ಆಪರೇಟಿವ್ ಸೊಸೈಟಿ ಲಿ. ವಾರ್ಷಿಕ ಮಹಾಸಭೆ

ಉಡುಪಿ: ನಗರದ ಪ್ರತಿಷ್ಠಿತ ಎಂಜಿಎಂ ಕಾಲೇಜು ಬಳಿ ಕಳೆದ ಮೂರು ವರ್ಷಗಳಿಂದ ಕಾರ್ಯಚರಿಸುತ್ತಿರುವ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ನ ವಾರ್ಷಿಕ ಮಹಾಸಭೆಯು ನೂತನ ರವೀಂದ್ರ ಮಂಟಪ ಎಂಜಿಎಂ ಕಾಲೇಜು ಆವರಣದಲ್ಲಿ ಸದಸ್ಯರ ಸಮ್ಮುಖದಲ್ಲಿ ನಡೆಯಿತು. ಸೊಸೈಟಿಯ ಅಧ್ಯಕ್ಷೆ ಜೆಸಿಂತಾ ಡಿಸೋಜಾ ಅಧ್ಯಕ್ಷತೆ ವಹಿಸಿ, ಸಭೆಯನ್ನು ನಡೆಸಿದರು. ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ನ ಉಡುಪಿ ವಿಭಾಗದ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ ಎಸ್ ಉಡುಪಿ […]
ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ: ಮುಸ್ಲಿಂ ಬಾಂಧವ್ಯ ವೇದಿಕೆ ಆಗ್ರಹ

ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ, ದೇಶಾದ್ಯಂತ ಗೋಹತ್ಯೆ ಹಾಗೂ ಗೋಮಾಂಸ ರಫ್ತನ್ನು ಸಂಪೂರ್ಣವಾಗಿ ನಿಷೇಧಿಸುವ ಕಾನೂನು ಜಾರಿಗೊಳಿಸಬೇಕು ಎಂದು ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕದ ವಕ್ತಾರ ಮುಸ್ತಾಕ್ ಹೆನ್ನಾಬೈಲು ಆಗ್ರಹಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿನ ಕಸಾಯಿಖಾನೆಗಳನ್ನು ಮುಚ್ಚಿ, ಗೋಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಗೋಹತ್ಯೆ ವಿಚಾರದಲ್ಲಿ ಕೇಂದ್ರ ಸರ್ಕಾರ ಜನರನ್ನು ದಾರಿತಪ್ಪಿಸುತ್ತಿದೆ ಎಂದು ಆರೋಪಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ […]
ಉಡುಪಿ: ಭಾರತ್ ಮಾರ್ಕೆಟಿಂಗ್ ಸಂಸ್ಥೆಗೆ ಯುವಕರು ಬೇಕಾಗಿದ್ದಾರೆ.

ಉಡುಪಿ: ಉಡುಪಿಯ ಬನ್ನಂಜೆ ನಾರಾಯಣಗುರು ಸಂಕೀರ್ಣ ದಲ್ಲಿರು ಪ್ರತಿಷ್ಠಿತ ಭಾರತ್ ಮಾರ್ಕೆಟಿಂಗ್ ಸಂಸ್ಥೆಗೆ ಯುವಕರು ಬೇಕಾಗಿದ್ದಾರೆ. ವಿದ್ಯಾರ್ಹತೆ ಅವಶ್ಯಕತೆ ಇರುವುದಿಲ್ಲ. ಆಕರ್ಷಕ ವೇತನ ನೀಡಲಾಗುವುದು. ಆಸಕ್ತರು ಸಂಸ್ಥೆಗೆ ಬಂದು ಭೇಟಿಯಾಗಬಹುದು. ಸಂಪರ್ಕಿಸಿ: 9845460303