ಉಡುಪಿ: ಪೊದಾರ್ ಇಂಟರ್ನ್ಯಾಷನಲ್ ಶಾಲೆ ,ಉಡುಪಿ ಇಲ್ಲಿ ನ.30 ರಂದು ವಾರ್ಷಿಕ ಕ್ರೀಡಾಕೂಟವನ್ನು ನಡೆಸಲಾಯಿತು.
ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಗಿರೀಶ್ ಕುಮಾರ್ ಪ್ರಾಂಶುಪಾಲರು ಪೊದಾರ್ ಇಂಟರ್ನ್ಯಾಷನಲ್ ಶಾಲೆ ಮಂಗಳೂರು ಮಾತನಾಡಿ,ನಮಗೆ ವಿದ್ಯೆಯಂತೆ ಕ್ರೀಡೆಗಳು ಕೂಡ ವ್ಯಕ್ತಿತ್ವ ವಿಕಸನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.ಮಕ್ಕಳು ಉತ್ತಮ ಆರೋಗ್ಯಕ್ಕಾಗಿ ವ್ಯಾಯಮ, ವಿವಿಧ ಕ್ರೀಡೆಗಳನ್ನು ಆಡುವ ಹವ್ಯಾಸ ಬೆಳೆಸಿಕೊಳ್ಳಬೇಕು.ಪೊದಾರ್ನಲ್ಲಿ ದೈಹಿಕ ಶಿಕ್ಷಣವು ವೈಜ್ಞಾನಿಕ ದೃಷ್ಟಿಕೋನದಿಂದ ರೂಪಿಸಲ್ಪಟ್ಟಿದೆ ಎಂದರು.
ಗಿರೀಶ್ ಮೆನನ್ ನರಶಾಸ್ತ್ರಜ್ಞರು ಕೆ.ಎಮ್.ಸಿ. ಮಣಿಪಾಲ ಕ್ರೀಡಾಕ್ಷೇತದಲ್ಲಿ ಸಾಧನೆ ಮಾಡಿದಂತಹ ಸಾಧಕರ ಉದಾಹರಣೆಗಳನ್ನು ನೀಡಿ ಮಕ್ಕಳನ್ನು ಹುರಿದುಂಬಿಸಿದರು.
ಶಾಲಾ ನಾಯಕಿ ದಿಯಾ ಕಾರ್ಣಿಕ್ ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ವಿಧಿ ಬೋಧಿಸಿದರು.ಮಕ್ಕಳಿಂದ ನಡೆದ ವಿವಿಧ ರೀತಿಯ ಡ್ರಿಲ್ ಮತ್ತು ಸಾಂಸ್ಕೃತಿಕ ಪ್ರದರ್ಶನ ನಡೆಯಿತು.
ಶಾಲಾ ಪ್ರಾಂಶುಪಾಲರಾದ ಎಮ್.ಎಸ್.ಹಿರೇಮಠ ಮಾತನಾಡಿ ನಾವು ದೈಹಿಕವಾಗಿ ಆರೋಗ್ಯವಾಗಿದ್ದರೆ ಚಟುವಟಿಕೆಯಿಂದ ಇರಬಹುದು. ಉತ್ತಮ ಆರೋಗ್ಯ ಹೊಂದಿದ್ದರೆ ಯಾವುದೇ ರೀತಿಯ ಚಟುವಟಿಕೆಯಲ್ಲಿ ಪಾಲ್ಗೊಳ್ಳಬಹುದು ಎಂದರು.
ಟೆರ್ರ ಹೌಸ್ ಕ್ರೀಡಾಕೂಟದ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಕಾರ್ಯಕ್ರಮವನ್ನು ಶಿಕ್ಷಕಿಯರಾದ ವೇದಾವತಿ ಪುರೋಹಿತ್ ಮತ್ತು ಅಶ್ವಿನಿ ಅಂಚನ್ ನಿರೂಪಿಸಿದರು. ವಿದ್ಯಾರ್ಥಿಗಳಾದ ದಿಯಾ ಕಾರ್ಣಿಕ್ ಸ್ವಾಗತಿಸಿ,ದಕ್ಷ್ ಭಂಡಾರಿ ವಂದಿಸಿದರು.ಪೋಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.