ಉಡುಪಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿ ಇಲ್ಲಿಯ ಮಕ್ಕಳಿಗೆ ಉಡುಪಿಯ ವಕೀಲರಾದ ಮಹಮ್ಮದ್ ಸುಹಾನ್ ಇವರು ನೀಡಿದ ನೋಟ್ ಬುಕ್ ಗಳನ್ನು ಬ್ರಹ್ಮಾವರದ NNO ರಿಜಿಸ್ಟರ್ಡ್ ಸಂಸ್ಥೆ (ನಮ್ಮ ನಾಡ ಒಕ್ಕೂಟ ರಿಜಿಸ್ಟರ್ಡ್) ವತಿಯಿಂದ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ಶ್ರೀಮತಿ ಸಬೀನಾ ರವರು ವಹಿಸಿದ್ದರು.
ಶಾಲೆಯಲ್ಲಿ ಪ್ರಸ್ತುತ ವರ್ಷದಿಂದ 1 ನೇ ತರಗತಿಯಿಂದ 7 ನೇ ತರಗತಿ ವರೆಗೆ ಆಂಗ್ಲ ಮಾಧ್ಯಮ ಪ್ರಾರಂಭವಾಗಿದೆ. ಆರಂಭದಲ್ಲಿ 7 ನೇ ತರಗತಿ ಮಕ್ಕಳು ಇಂಗ್ಲಿಷ್ ಭಾಷೆಯಲ್ಲಿ ಪ್ರಾರ್ಥನೆ ಮಾಡಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸರಸ್ವತಿ ಯವರು ಸರ್ವರನ್ನು ಸ್ವಾಗತಿಸಿದರು. ನಂತರ ದಾನಿಗಳು ನೀಡಿದ ನೋಟ್ ಬುಕ್ ಮತ್ತು ಸ್ಟೇಷನರಿ ಸಾಮಾಗ್ರಿ ಮತ್ತು ಮಾಜಿ ಗ್ರಾಮ ಪಂಚಾಯತ್ ಸದಸ್ಯ ಇಸ್ಮಾಯಿಲ್ ರವರು ನೀಡಿದ ಫೈಲ್ ಗಳನ್ನು ವಿತರಣೆ ಮಾಡಲಾಯಿತು. ಅತಿಥಿಯರು ಮಕ್ಕಳಿಗೆ ಹಿತವಚನ ನೀಡಿದರು.
ವೇದಿಕೆಯಲ್ಲಿಉಡುಪಿಯ ವಕೀಲರಾದ ಮೊಹಮ್ಮದ್ ಸುಹಾನ್, NNO ಬ್ರಹ್ಮಾವರ ಘಟಕ ಅಧ್ಯಕ್ಷರಾದ ಶಕೀರ್ ಎಮ್ ಹಾವಂಜೆ, NNO ಜಿಲ್ಲಾ ಸಮಿತಿಯ ಸದಸ್ಯರಾದ ಹಾರುನ್ ರಶೀದ್ ಸಾಹೇಬ್, NNO ಬ್ರಹ್ಮಾವರ ಘಟಕದ ಪ್ರಧಾನ ಕಾರ್ಯದರ್ಶಿಯವರಾದ ಸಲಿಂ ಶೇಕ್, SDMC ಉಪಾಧ್ಯಕ್ಷೆ ಶ್ರೀಮತಿ ಕೀರ್ತಿ ನಾಯಕ್, ಹಳೆ ವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷರಾದ ಉದಯ ಹೆಗ್ಡೆ ಶಾಲಾ ಹಿತ ಚಿಂತಕ ಹರೀಶ್ ಹೆಗ್ಡೆ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತ್ಯಾನಂದ ನಾಯಕ್, ಮಾಜಿ SDMC ಅಧ್ಯಕ್ಷ ಅಬ್ದುಲ್ ರಹಿಮಾನ್ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಶ್ರೀಮತಿ ಜ್ಯೋತಿ, ಶ್ರೀಮತಿ ಸುಹಾಸಿನಿ, ಶ್ರೀಮತಿ ವಿಮಲಾ, ಶ್ರೀಮತಿ ಶಾರದಾ ಮುಂತಾದವರು ಉಸ್ಥಿತರಿದ್ದರು. ಕೊನೆಯಲ್ಲಿ ಶಿಕ್ಷಕಿ ಶ್ರೀಮತಿ ಶಬನಾ ಪರ್ವೀನ್ ರವರು ಎಲ್ಲರಿಗೂ ಧನ್ಯವಾದವನ್ನು ನೀಡಿದರು.















