ಶ್ರವಣ ಸಮಸ್ಯೆಗಳಿಗೆ ಇಲ್ಲಿ ಸಿಗುತ್ತೆ ಅದ್ಬುತ ಪರಿಹಾರ: ಉಡುಪಿಯ ಸ್ಪೀಚ್ & ಹೇರಿಂಗ್ ಕೇರ್ ಸೆಂಟರ್‌ನಲ್ಲಿ ನಿಮಗೆ ಸಿಗಲಿದೆ ಸಮಗ್ರ ಸೇವೆ.

ಉಡುಪಿ: ಇತ್ತೀಚಿನ ದಿನಗಳಲ್ಲಿ ಶ್ರವಣ ಸಮಸ್ಯೆಗಳು ಹಾಗೂ ಮಾತಿನ ತೊಂದರೆಗಳು ಎಲ್ಲ ವಯೋಮಾನದವರಲ್ಲೂ ಹೆಚ್ಚಾಗುತ್ತಿವೆ.ಇದಕ್ಕೆ ಪರಿಹಾರ ಕಂಡುಕೊಳ್ಳಲು ತುಂಬಾ ಜನರಿಗೆ ಸಾಧ್ಯವಾಗುವುದಿಲ್ಲ. ಆದರೆ ಉಡುಪಿಯ ಸ್ಪೀಚ್ & ಹೇರಿಂಗ್ ಕೇರ್ ಸೆಂಟರ್‌ನಲ್ಲಿ ನಿಮ್ಮ ಎಲ್ಲಾ ಶ್ರವಣ ಸಮಸ್ಯೆಗಳಿಗೆ ತಕ್ಷಣ ಸಿಗುತ್ತೆ ಪರಿಹಾರ.

ಹೌದು. ಇಂತಹ ಸಮಸ್ಯೆಗಳಿಗೆ ಸಮರ್ಪಕ ಪರಿಹಾರ ಒದಗಿಸುವ ಉದ್ದೇಶದಿಂದ ಉಡುಪಿಯಲ್ಲಿರುವ ಸ್ಪೀಚ್ & ಹೇರಿಂಗ್ ಕೇರ್ ಸೆಂಟರ್ ಜನರಿಗೆ ವಿಶೇಷ ಸೇವೆಗಳನ್ನು ನೀಡುತ್ತಿದೆ.

ಏನೇನು ಸೇವೆಗಳು?

ಆಡಿಯಾಲಜಿಸ್ಟ್ ಹಾಗೂ ಸ್ಪೀಚ್ ಲ್ಯಾಂಗ್ವೇಜ್ ಪಥಾಲಜಿಸ್ಟ್ ನಿರ್ಮಲ ಪ್ರಭು ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೇಂದ್ರದಲ್ಲಿ ಶ್ರವಣ ಶಕ್ತಿ ಪರೀಕ್ಷೆ, ಕಿವಿಯಲ್ಲಿ ನಿರಂತರ ಶಬ್ದ ಕೇಳಿಸುವ ಸಮಸ್ಯೆ (ಟಿನಿಟಸ್), ಸಂಭಾಷಣೆ ಅರ್ಥಮಾಡಿಕೊಳ್ಳುವ ತೊಂದರೆ, ಮೊಬೈಲ್‌ನಲ್ಲಿ ಮಾತನಾಡುವಾಗ ಕೇಳುವ ಸಮಸ್ಯೆ ಸೇರಿದಂತೆ ವಿವಿಧ ಶ್ರವಣ ಸಂಬಂಧಿತ ಸಮಸ್ಯೆಗಳ ಮೌಲ್ಯಮಾಪನ ಮತ್ತು ಚಿಕಿತ್ಸೆ ಲಭ್ಯವಿದೆ. ಕೇಂದ್ರವು ಶ್ರವಣ ಮೌಲ್ಯಮಾಪನ, ಸಲಹೆ ಹಾಗೂ ಶ್ರವಣ ಸಾಧನಗಳ ಕುರಿತು ಮಾರ್ಗದರ್ಶನವನ್ನು ಸಹ ಒದಗಿಸುತ್ತದೆ.

ಸಾಮಾಜಿಕ ಕಾರ್ಯಕ್ರಮಗಳು, ಮದುವೆ ಸಮಾರಂಭಗಳು, ಸಭೆಗಳು ಅಥವಾ ಗದ್ದಲದ ವಾತಾವರಣದಲ್ಲಿ ಸಂಭಾಷಣೆ ಅರ್ಥಮಾಡಿಕೊಳ್ಳಲು ಕಷ್ಟಪಡುವವರು, ಟಿವಿ ಅಥವಾ ಮೊಬೈಲ್‌ನ ಶಬ್ದವನ್ನು ಇತರರಿಗಿಂತ ಹೆಚ್ಚಾಗಿ ಇಡುವವರು ಹಾಗೂ ಇತರರ ಮಾತು ಅಸ್ಪಷ್ಟವಾಗಿ ಕೇಳಿಸುತ್ತಿದೆ ಎಂದು ಭಾವಿಸುವವರು ತಜ್ಞರ ಸಲಹೆ ಪಡೆಯುವುದು ಅಗತ್ಯ ಎಂದು ಡಾ. ನಿರ್ಮಲ ಪ್ರಭು ತಿಳಿಸುತ್ತಾರೆ.

ವಿಶೇಷವಾಗಿ ಶಬ್ದ ಮಾಲಿನ್ಯ ಹೆಚ್ಚಿರುವ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರು ತಮ್ಮ ಶ್ರವಣ ಶಕ್ತಿಯನ್ನು ಪ್ರತಿವರ್ಷ ಪರೀಕ್ಷಿಸಿಕೊಳ್ಳುವುದು ಉತ್ತಮ ಎನ್ನುವುದು ತಜ್ಞರ ಅಭಿಪ್ರಾಯ.

ಸ್ಪೀಚ್ & ಹೇರಿಂಗ್ ಕೇರ್ ಸೆಂಟರ್ ಉಡುಪಿ ಜಿಲ್ಲಾ ನ್ಯಾಯಾಲಯದ ಸಮೀಪದ, ಪೈ ಎಲೆಕ್ಟ್ರಾನಿಕ್ಸ್ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ 8867693809 ಅಥವಾ 9880029809 ಸಂಪರ್ಕಿಸಬಹುದು.