ಉಡುಪಿ: ಬ್ರಹ್ಮಾವರ ಹೊಸಾಳ ಗ್ರಾಮದ ಬಾರ್ಕೂರು ನಿವಾಸಿ ಪ್ರತಾಪ್ ಶೆಟ್ಟಿ(42) ಎಂಬವರು ಏಪ್ರಿಲ್ 7 ರಂದು ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದವರು ಬೆಂಗಳೂರಿಗೆ ಹೋಗದೆ ಏಪ್ರಿಲ 13 ರಂದು ಕಾಡೂರು ಹೊಳೆಯಲ್ಲಿ ಕಲ್ಲಿನ ಮೇಲೆ ಉಡುಪುಗಳು ಹಾಗೂ ಮೊಬೈಲ್ ಬಿಟ್ಟು ನಾಪತ್ತೆಯಾಗಿರುತ್ತಾರೆ.
5 ಅಡಿ ಎತ್ತರ, ಗೋಧಿ ಮೈ ಬಣ್ಣ, ದುಂಡು ಮುಖ ಹೊಂದಿದ್ದು ಕನ್ನಡ, ಹಿಂದಿ, ತಮಿಳು ಮಾತಾಡುತ್ತಾರೆ.
ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ ದೂ.ಸಂ: 0820-2461044, 9480805453 ಅನ್ನು ಸಂಪರ್ಕಿಸುವoತೆ ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

















