“ಕೋಟ ಮೂರ್ತೆದಾರರ ಸಹಕಾರಿ ಸಂಘ ಮಹಾಸಭೆ”

570 ಕೋಟಿ ರೂ. ವ್ಯವಹಾರ, 1.15 ಕೋಟಿ ನಿವ್ವಳ ಲಾಭ


ಕೋಟ: ಮೂರ್ತೆದಾರರ ಸಹಕಾರಿ ಸಂಘವು 2025-26ನೇ ಸಾಲಿನಲ್ಲಿ 570 ಕೋಟಿ ರೂ. ವ್ಯವಹಾರ ನಡೆಸಿ ರೂ. 1.15 ಕೋಟಿ ನಿವ್ವಳ ಲಾಭ ಗಳಿಸಿದ್ದು. ಶೇ. 13 ಡಿವಿಡೆಂಡ್‌ ನ್ನು ಸಂಘದ ಪ್ರಧಾನ ಕಛೇರಿಯ ಸಭಾಂಗಣದಲ್ಲಿ ಜರುಗಿದ ಸಂಘದ 35ನೇ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಕೆ. ಕೊರಗ ಪೂಜಾರಿ ಘೋಷಿಸಿದರು. ಸಂಘದ 6 ಶಾಖೆಗಳ ಮೂಲಕ ರೂ.102.67 ಕೋಟಿ ಠೇವಣಿ ಸಂಗ್ರಹಿಸಿದ್ದು; ಕಳೆದ ಬಾರಿಗೆ ಹೋಲಿಸಿದರೆ ಠೇವಣಿ. ಸಂಗ್ರಹಣೆಯಲ್ಲಿ ಶೇ. 23ರಷ್ಟು ಹೆಚ್ಚಳವಾಗಿದೆ. ಸಂಘದ ಸಾಲ ಮುಂಗಡಗಳು ರೂ. 88.08 ಕೋಟಿ. ಪಾಲು ಬಂಡವಾಳ 1.45 ಕೋಟಿ. ವಿವಿಧ ಸಹಕಾರಿ ಸಂಘ ಹಾಗೂ ಬ್ಯಾಂಕ್‌ನಲ್ಲಿ ರೂ. 26.64 ಕೋಟಿ ವಿನಿಯೋಗಿಸಿದೆ. ಹಾಗೂ ವಿವಿಧ ನಿಧಿಗಳು ರೂ. 12.09 ಕೋಟಿ ಆಗಿರುತ್ತದೆ. ಸಂಘದ ದುಡಿಯುವ ಬಂಡವಾಳ 125.20 ಕೋಟಿಗೂ ಮೀರಿದೆ. ಸತತ 30 ವರ್ಷಗಳಿಂದ ‘ಎ’ ತರಗತಿ ಆಡಿಟ್ ವರ್ಗೀಕರಣ ಪಡೆದಿರುತ್ತದೆ.


ಸಂಘದ ಕೇಂದ್ರ ಕಛೇರಿ ಹಾಗೂ ಸಾಸ್ತಾನ ಶಾಖೆಯು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು; ಇತ್ತೀಚೆಗೆ ಕೇಂದ್ರ ಕಛೇರಿಯ ಕಟ್ಟಡವು ಕೋಟ ಬಸ್ ನಿಲ್ದಾಣದ ಬಳಿ ರೂ. 4 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಮಾನ್ಯ ಸಹಕಾರಿ ಸಚಿವರಿಂದ ಲೋಕಾರ್ಪಣೆಗೊಂಡಿದೆ. ಸುಸಜ್ಜಿತ ಹವಾ ನಿಯಂತ್ರಿತ ಸಭಾಭವನ ಹಾಗೂ ವಾಣಿಜ್ಯ ಸಂಕೀರ್ಣವನ್ನು ಹೊಂದಿರುತ್ತದೆ. ಸಂಘವು ಮಹಿಳಾ ಸಶಕ್ತಿಕರಣಕ್ಕಾಗಿ 279 ಕಲ್ಪತರು ಮಹಿಳಾ ಸ್ವಸಹಾಯ ಗುಂಪುಗಳನ್ನು ಪ್ರಾಯೋಜಿಸಿದ್ದು ರೂ. 5.56 ಕೋಟಿ ಸಾಲ ಸೌಲಭ್ಯ ಒದಗಿಸಿದೆ. ಸಂಘದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ. ಸದಸ್ಯರ ಮಕ್ಕಳಿಗೆ ಉಚಿತ ನೋಟ್ಸ್ ಪುಸ್ತಕ ವಿತರಣೆ. ಉನ್ನತ ವ್ಯಾಸಂಗ ನಿಧಿಯಿಂದ ವಿಧ್ಯಾರ್ಥಿವೇತನ, ಸಂಘದ ಸದಸ್ಯರಿಗೆ ಸಾಮೂಹಿಕ ವಿಮೆ, ಮರಣ ನಿಧಿ. ಸದಸ್ಯರ ಸಹಾಯಕ ನಿಧಿ ಮೂಲಕ ಅನಾರೋಗ್ಯಕ್ಕೆ ಒಳಗಾದ ಸದಸ್ಯರಿಗೆ ಸಹಾಯಹಸ್ತ, ಸದಸ್ಯರ ಕ್ಷೇಮಾಭಿವೃದ್ಧಿ ನಿಧಿಯಿಂದ ರೂ. 1 ಲಕ್ಷ ವೈಯಕ್ತಿಕ ಸಾಲ ಹಾಗೂ ಸ್ವಸಹಾಯ ಗುಂಪಿನ ಸಾಲ ಪಡೆದ ಸದಸ್ಯರು ಮೃತರಾದಲ್ಲಿ ಬಾಕಿ ಸಾಲದ ಮೊತ್ತದ ಶೇಕಡಾ 25ರಷ್ಟನ್ನು ಕ್ಷೇಮಾಭಿವೃದ್ಧಿ ನಿಧಿಯಿಂದ ಭರಿಸಲಾಗುತ್ತಿದೆ ಎಂದು ವಾರ್ಷಿಕ ಮಹಾಸಭೆಯ ವರದಿಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕೆಮ್ಮಣ್ಣು ತಿಳಿಸಿದರು.


ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ಜಯರಾಮ ಪೂಜಾರಿ ಬಾರ್ಕೂರು, ಮಾಜಿ ಅಧ್ಯಕ್ಷರಾದ ರಾಜು ಪೂಜಾರಿ, ಪಿ. ಕೃಷ್ಣ ಪೂಜಾರಿ ಪಾರಂಪಳ್ಳಿ, ನಿರ್ದೇಶಕರಾದ ಜಿ. ಸಂಜೀವ ಪೂಜಾರಿ ಕೋಡಿ, ರಾಮ ಪೂಜಾರಿ, ಮಂಜುನಾಥ ಪೂಜಾರಿ ಬಂಡಿಮಠ, ಕೃಷ್ಣ ಪೂಜಾರಿ ಪಿ. ಕೋಡಿ ಕನ್ಯಾಣ, ಪ್ರಭಾವತಿ ಡಿ. ಬಿಲ್ಲವ ಕೋಟ, ಭಾರತಿ ಎಸ್. ಪೂಜಾರಿ ಕರಿಕಲ್‌ಕಟ್ಟೆ, ಸಹಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಕೃಷ್ಣ ಹಾಗೂ ಶ್ರೀದೇವಿಕಲ್ಕೂರ ಉಪಸ್ಥಿತರಿದ್ದರು. ಹಿರಿಯ ವ್ಯವಸ್ಥಾಪಕರಾದ ಉದಯ ಪೂಜಾರಿ ಕೋಡಿ ವೇದಿಕೆಗೆ ಆಹ್ವಾನಿಸಿದರು, ಕೋಟ ಶಾಖೆಯ ಹಿರಿಯ ವ್ಯವಸ್ಥಾಪಕರಾದ ದಿನೇಶ್ ಪೂಜಾರಿ ಬಾರ್ಕೂರು ಸ್ವಾಗತಿಸಿ, ನಿತೇಶ್ ಹಂದಟ್ಟು ವಂದಿಸಿದರು, ಹಿರಿಯ ವ್ಯವಸ್ಥಾಪಕರಾದ ರಮೇಶ್ ಪೂಜಾರಿ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು.