“ಎಕ್ಸ್ಪರ್ಟ್ ಪಿಯು ಕಾಲೇಜು: ಜೆಇಇ ಎಡ್ವಾನ್ಸ್ಡ್’ನಲ್ಲಿ ಉತ್ತಮ ಫಲಿತಾಂಶ”

ದೇಶದ ಪ್ರತಿಷ್ಠಿತ ಐಐಟಿಗಳಲ್ಲಿ ಎಂಜಿನಿಯರಿಂಗ್ ಶಿಕ್ಷಣದ ಪ್ರವೇಶಕ್ಕಾಗಿ ನಡೆಯುವ ಅಖಿಲ ಭಾರತ ಮಟ್ಟದ ಜೆಇಇ ಎಡ್ವಾನ್ಸ್ಡ್’ ಪರೀಕ್ಷೆಯ ಜನರಲ್ ಮೆರಿಟ್ ವಿಭಾಗದಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಸುಹಾಸ್ ಬಸನಗೌಡ ಬಾಲನಗೌಡ್ರ ಜನರಲ್ ಕೆಟಗರಿ ವಿಭಾಗದಲ್ಲಿ 2593 ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಜನರಲ್ ಮೆರಿಟ್ ವಿಭಾಗದಲ್ಲಿ ಅರಳೆ ವಿರೂಪಾಕ್ಷಿ 7885ನೇ ರ‍್ಯಾಂಕ್, ನಿಖಿಲ್ ಭೂಷಣ್ ಶ್ರೀನಿವಾಸ್ 9150ನೇ ರ‍್ಯಾಂಕ್, ಪ್ರಖ್ಯಾತ್ ತಿರುಪತಿರಡ್ಡಿ ನೀಲಣ್ಣವರ್ 9806ನೇ ರ‍್ಯಾಂಕ್, ಕ್ಯಾಟಗರಿ ವಿಭಾಗದಲ್ಲಿ ಟಿ.ಶ್ರೀ ಸಾಯಿ ಕಾರ್ತಿಕ್ 318 ನೇ ರ‍್ಯಾಂಕ್, ಗುರು ಸುಬ್ರಮಣ್ಯ ಪಿ. 323ನೇ ರ‍್ಯಾಂಕ್, ರಾಜೀವ್ ಲೋಚನ್ ರೆಡ್ಡಿ ಟಿ.1446ನೇ ರ‍್ಯಾಂಕ್, ಸುಧನ್ವ
1558ನೇ ರ‍್ಯಾಂಕ್, ಪ್ರಜ್ವಲ್ ಪ್ಯಾಟಿ 2461ನೇ ರ‍್ಯಾಂಕ್, ಯಶಸ್ ಎನ್.ಎಂ. 2747ನೇ ರ‍್ಯಾಂಕ್, ಹರ್ಷಿತ್ ಗೌಡ ಎಂ.ವೈ. 4285ನೇ ರ‍್ಯಾಂಕ್ ಪಡೆದಿದ್ದಾರೆ.
ಖರಗ್‌ಪುರ್, ಮುಂಬಯಿ, ಚೆನೈ, ಕಾನ್ಪುರ, ಹೊಸದಿಲ್ಲಿ, ಗೌಹಾಟಿ, ರೂರ್ಕಿ, ರೋಪರ್, ಭುವನೇಶ್ವರ, ಗಾಂಧಿನಗರ, ಹೈದರಾಬಾದ್, ಜೋದಪುರ, ಪಾಟ್ನಾ, ಇಂದೋರ್, ಮಂಡಿ, ವಾರಣಾಸಿ, ಪಾಲಕ್ಕಾಡ್, ತಿರುಪತಿ, ಧನ್ಬಾದ್, ಭಾಲೈ, ಗೋವಾ, ಜಮ್ಮು, ಧಾರವಾಡ ಐಐಟಿಗಳಲ್ಲಿ ಕಲಿಯುವ ಅವಕಾಶ ಈ ವಿದ್ಯಾರ್ಥಿಗಳಿಗೆ ದೊರೆತಿದೆ. ರ‍್ಯಾಂಕ್ ವಿಜೇತರಾಗಿರುವ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅಭಿನಂದಿಸಿದ್ದಾರೆ.