34 ವರ್ಷ ಸುರಕ್ಷಿತ ಚಾಲನೆಯ ಸೇವೆ ನೀಡಿದ ಚಾಲಕನಿಗೆ ಪ್ರಯಾಣಿಕರಿಂದ ಭಾವಪೂರ್ಣ ಬೀಳ್ಕೊಡುಗೆ

ಉಡುಪಿ: ಬಸ್ ಅಪಘಾತಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ, ಜಾಗ್ರತೆಯಿಂದ, ಪ್ರಯಾಣಿಕರೊಡನೆ ಸ್ನೇಹಪರ ನಡವಳಿಕೆಯಿಂದ ಸುರಕ್ಷಿತವಾಗಿ ಕರೆದೊಯ್ಯುವ ಚಾಲಕರು ಪ್ರಯಾಣಿಕರ ಮನಸ್ಸಿಗೆ ಹತ್ತಿರಾಗುತ್ತಾರೆ.

ಜಿಲ್ಲೆಯ ಉದ್ಯಾವರ ಮೂಲದ ಕೆಎಸ್‌ಆರ್‌ಟಿಸಿ ಹಿರಿಯ ಚಾಲಕ ಜೋಸೆಫ್ ಮಚಾದೊ ಅವರು 34 ವರ್ಷಗಳಿಗೂ ಅಧಿಕ ಕಾಲ ಸಾರಿಗೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಹಿನ್ನೆಲೆಯಲ್ಲಿ ಮುಂಬೈನ ಮೀರಾರೋಡ್‌ನಲ್ಲಿ ಬಸ್ ಅಭಿಮಾನಿಗಳು, ನಿತ್ಯ ಪ್ರಯಾಣಿಕರು ಹಾಗೂ ಸ್ಥಳೀಯ ಬಸ್ ಏಜೆಂಟರು ಅವರನ್ನು ಸನ್ಮಾನಿಸಿ ಗೌರವಿಸಿದರು.

ಮಂಗಳೂರು–ಮುಂಬೈ ಮಾರ್ಗದಲ್ಲಿ ವೋಲ್ವೊ ಸೆಮಿ-ಸ್ಲೀಪರ್ ಬಸ್ ಚಾಲಕರಾಗಿ ಸೇವೆ ಸಲ್ಲಿಸಿದ್ದ ಜೋಸೆಫ್ ಮಚಾದೊ ಅವರು ಸುರಕ್ಷಿತ ಚಾಲನೆ, ವೃತ್ತಿಪರತೆ ಹಾಗೂ ಸ್ನೇಹಪರ ನಡವಳಿಕೆಯಿಂದ ಪ್ರಯಾಣಿಕರ ಮೆಚ್ಚುಗೆ ಗಳಿಸಿದ್ದರು. ಅವರ ನಿವೃತ್ತಿ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿತ್ಯ ಪ್ರಯಾಣಿಕರು ಮತ್ತು ಬಸ್ ಅಭಿಮಾನಿಗಳು, ಏಜೆಂಟರು ಭಾಗವಹಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಅಶ್ವಿನ್ ರೋಹನ್ ಡಿಸಿಲ್ವಾ Ashwin Rohan D’Silva ಉಪಸ್ಥಿತರಿದ್ದು ಜೋಸೆಫ್ ಮಚಾದೊ ಅವರನ್ನು ಸನ್ಮಾನಿಸಿದರು.