ಉಡುಪಿ: ಮೀನು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನದ ಟಯರ್ ಸ್ಪೋಟಗೊಂಡ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ಬದಿಯ ಫುಟ್ಪಾತ್ ಮೇಲೆ ಏರಿದ ಘಟನೆ ಹಿರಿಯಡಕ ಪೇಟೆ ಸಮೀಪ ಶನಿವಾರ ಬೆಳಿಗ್ಗೆ ಸಂಭವಿಸಿತು.
ವಾಹನ ಮಲ್ಪೆಯಿಂದ ಸಾಗರದ ಕಡೆಗೆ ಸಾಗುತ್ತಿತ್ತು. ಹಿರಿಯಡಕ ಸಮೀಪಿಸುತ್ತಿದ್ದಂತೆ ಈ ಅವಘಡ ನಡೆದಿದೆ. ಅಪಘಾತದ ವೇಳೆ ವಾಹನದಲ್ಲಿದ್ದ ಮೀನಿನ ಬಾಕ್ಸ್ಗಳು ರಸ್ತೆಗೆ ಬಿದ್ದಿದ್ದು, ಮೀನುಗಳು ಚೆಲ್ಲಾಪಿಲ್ಲಿಯಾಗಿವೆ.
ಘಟನೆಯಲ್ಲಿ ವಾಹನ ಚಾಲಕ ಅಪಾಯದಿಂದ ಪಾರಾಗಿದ್ದು, ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಸ್ಥಳೀಯರ ಸಹಕಾರದಿಂದ ವಾಹನವನ್ನು ಸುರಕ್ಷತವಾಗಿ ತೆರವುಗೊಳಿಸಲಾಯಿತು.

















