ಉತ್ತರ ಕನ್ನಡ: ಭಟ್ಕಳದಲ್ಲಿ ಚಿಪ್ಪಿಕಲ್ಲು ಆರಿಸಲು ಹೋಗಿದ್ದ ಒಂದೇ ಕುಟುಂಬದ 12 ಜನರು ಸಮುದ್ರದ ಅಲೆಗೆ ಕೊಚ್ಚಿ ಹೋಗಿದ್ದಾರೆ. ಎಂಟು ಜನರ ಮೃತದೇಹ ಸಿಕ್ಕಿದೆ. ಇಬ್ಬರು ನಾಪತ್ತೆಯಾಗಿದ್ದು, ಇಬ್ಬರು ಅಪಾಯದಿಂದ ಪಾರಾಗಿದ್ದಾರೆ.
ಭಾನುವಾರ ಬೆಳಿಗ್ಗೆ ಭಟ್ಕಳದ ತಟ್ಟೆ ಹಕ್ಕಲು ಬಳಿ ಘಟನೆ ನಡೆದಿದೆ. ಎಂದಿನಂತೆ ನದಿ ಸಮುದ್ರ ತೀರಕ್ಕೆ ಕಪ್ಪೆ ಚಿಪ್ಪು ತರಲು ಕುಟುಂಬ ಮಕ್ಕಳು ಸೇರಿದಂತೆ 12 ಮಂದಿ ತೆರಳಿದ್ದಾರೆ. ದೊಡ್ಡ ಅಲೆಗೆ ಸಿಲುಕಿ 12 ಮಂದಿ ಕೊಚ್ಚಿ ಹೋಗಿದ್ದಾರೆ. ಇಬ್ಬರು ಪಾರಾಗಿದ್ದು, 8 ಮಂದಿ ಸಾವಿಗೀಡಾಗಿದ್ದಾರೆ. ಉಳಿದ ಇಬ್ಬರ ಹುಡುಕಾಟ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

















