ಮಂಗಳೂರು–ಬೆಂಗಳೂರು ನಡುವೆ ಬಹುನಿರೀಕ್ಷಿತ ವಂದೇ ಭಾರತ್ ರೈಲು Vande Bharat Express ರೈಲು ಸೇವೆ ಮುಂದಿನ ತಿಂಗಳಲ್ಲಿ ಆರಂಭವಾಗುವ ಸಾಧ್ಯತೆ ಇದೆ ಎಂದು ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ.
ಮಂಗಳೂರು–ಬೆಂಗಳೂರು ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದೆ. ಪ್ರಧಾನಿ ಅವರು ದೇಶದ ವಿವಿಧ ಹೊಸ ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದು, ಆ ಪಟ್ಟಿಯಲ್ಲಿ ಮಂಗಳೂರು–ಬೆಂಗಳೂರು ಮಾರ್ಗವೂ ಸೇರಿದೆ. ಈ ರೈಲು ಸೇವೆಯಿಂದ ಕರಾವಳಿ ಭಾಗದ ಜನರು, ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ವ್ಯಾಪಾರಿಗಳಿಗೆ ವೇಗವಾದ ಮತ್ತು ಸುಲಭ ಪ್ರಯಾಣ ಸೌಲಭ್ಯ ಸಿಗಲಿದೆ ಎಂದವರು ತಿಳಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದ ಬಳಿ ಹೊಸ ರೈಲು ನಿಲ್ದಾಣ
Mangalore International Airport ಸಮೀಪ ಹೊಸ ರೈಲು ನಿಲ್ದಾಣ ನಿರ್ಮಾಣ ಸಾಧ್ಯತೆ ಕುರಿತು ಕಾರ್ಯಸಾಧ್ಯತಾ ಅಧ್ಯಯನ ನಡೆಯುತ್ತಿದೆ. ಮಂಗಳೂರು–ಸುಬ್ರಹ್ಮಣ್ಯ ರಸ್ತೆ ಪ್ಯಾಸೆಂಜರ್ ರೈಲನ್ನು MEMU ಸೇವೆಯಾಗಿ ಪರಿವರ್ತಿಸುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದವರು ತಿಳಿಸಿದರು.
ಮಂಗಳೂರು ಜಂಕ್ಷನ್ ಅಭಿವೃದ್ಧಿ
Mangaluru Junction railway station ಅನ್ನು ₹38 ಕೋಟಿ ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ. ಉದ್ಘಾಟನೆ ಅಕ್ಟೋಬರ್‌ನಲ್ಲಿ ನೆರೇರಲಿದೆ. ಹೆಚ್ಚುವರಿ ಸರಕು ಸಾಗಣೆ ಟ್ರ್ಯಾಕ್ ಅಭಿವೃದ್ಧಿಗೆ ₹40 ಕೋಟಿ ಯೋಜನೆ ಇದಾಗಿದ್ದು ಕಾಮಗಾರಿ 2027ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. Mangaluru Central railway station ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ಧವಾಗುತ್ತಿದೆ ಎಂದರು ಮಾಹಿತಿ ನೀಡಿದರು.
ಶಿವಮೊಗ್ಗ–ಶೃಂಗೇರಿ–ಮಂಗಳೂರು ಹೊಸ ರೈಲು ಮಾರ್ಗಕ್ಕೆ ಅನುಮೋದನೆ.
ಶಿವಮೊಗ್ಗ–ಶೃಂಗೇರಿ–ಮಂಗಳೂರು ಹೊಸ ರೈಲು ಮಾರ್ಗಕ್ಕೆ ಅನುಮೋದನೆ ದೊರೆತಿದ್ದು ಹಾಸನ–ಮಂಗಳೂರು ಜೋಡಿ ಮಾರ್ಗಕ್ಕೆ ₹8,300 ಕೋಟಿ ಯೋಜನೆ ಸಿದ್ದಗೊಂಡಿದೆ ಎಂದರು ಹೇಳಿದರು.

















