ಪ್ಲೇ ಆಫ್‌ ಗೆ ಟಾಪ್-2 ತಂಡಗಳು ಫಿಕ್ಸ್: ಯಾರೊಂದಿಗೆ ಆಡಲಿದೆ ಆರ್.ಸಿ.ಬಿ?

ರಾಯಲ್ ಚಾಲೆಂಜರ್ಸ್ ಬೆಂಗಳೂರು Royal Challengers Bengaluru ತಂಡವು ಸನ್ ರೈಸರ್ಸ್ ಹೈದರಾಬಾದ್ Sunrisers Hyderabad ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ 56 ರನ್‌ಗಳ ಸೋಲು ಕಂಡರೂ, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.

ಹೈದರಾಬಾದ್‌ನ Rajiv Gandhi International Cricket Stadium ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಸ್.ಆರ್.ಎಚ್. 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 255 ರನ್‌ಗಳ ಭಾರೀ ಮೊತ್ತ ಕಲೆಹಾಕಿತು. 256 ರನ್‌ಗಳ ಗುರಿ ಬೆನ್ನಟ್ಟಿದ ಆರ್.ಸಿ.ಬಿ. ಉತ್ತಮ ಹೋರಾಟ ನೀಡಿದರೂ ಸೋಲನ್ನು ತಪ್ಪಿಸಿಕೊಳ್ಳಲಿಲ್ಲ. ಆದರೆ ತಂಡ 190 ರನ್‌ಗಳನ್ನು ಗಳಿಸಿದ ಕಾರಣ ಉತ್ತಮ ನೆಟ್ ರನ್‌ರೇಟ್‌ನೊಂದಿಗೆ ಅಗ್ರಸ್ಥಾನ ಉಳಿಸಿಕೊಂಡಿತು. ಇದರೊಂದಿಗೆ ಆರ್.ಸಿ.ಬಿ ಅಧಿಕೃತವಾಗಿ ಕ್ವಾಲಿಫೈಯರ್-1ಗೆ ಪ್ರವೇಶಿಸಿದೆ.

ಅಧಿಕ ರನ್ ರೇಟ್ ನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನ

ಪಾಯಿಂಟ್ ಪಟ್ಟಿಯಲ್ಲಿ ಆರ್.ಸಿ.ಬಿ, ಗುಜರಾತ್ ಟೈಟಾನ್ಸ್ Gujarat Titans ಹಾಗೂ ಎಸ್.ಆರ್.ಎಚ್ ತಲಾ 18 ಅಂಕಗಳನ್ನು ಪಡೆದಿದ್ದರೂ, ನೆಟ್ ರನ್‌ರೇಟ್ ಆಧಾರದಲ್ಲಿ ಆರ್.ಸಿ.ಬಿ ಮೊದಲ ಸ್ಥಾನ ಪಡೆದುಕೊಂಡಿದೆ. ಗುಜರಾತ್ ಟೈಟಾನ್ಸ್ ಎರಡನೇ ಸ್ಥಾನದಲ್ಲಿದ್ದು, ಸನ್‌ರೈಸರ್ಸ್ ಹೈದರಾಬಾದ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

ಕ್ವಾಲಿಫೈಯರ್-1ನಲ್ಲಿ ಆರ್.ಸಿ.ಬಿಗೆ ಗುಜರಾತ್ ಟೈಟಾನ್ಸ್ ಎದುರಾಳಿ

ಈಗ ಮೇ 26ರಂದು ನಡೆಯಲಿರುವ ಕ್ವಾಲಿಫೈಯರ್-1 ಪಂದ್ಯದಲ್ಲಿ ಆರ್ಸಿಬಿ ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿವೆ. ಇನ್ನೊಂದೆಡೆ ನಾಲ್ಕನೇ ಪ್ಲೇಆಫ್ ಸ್ಥಾನಕ್ಕಾಗಿ ರಾಜಸ್ಥಾನ್ ರಾಯಲ್ಸ್ Rajasthan Royals, ಪಂಜಾಬ್ ಕಿಂಗ್ಸ್ Punjab Kings, ಕೋಲ್ಕತ್ತ ನೈಟ್ ರೈಡರ್ಸ್ Kolkata Knight Riders ಮತ್ತು ಡೆಲ್ಲಿ ಕ್ಯಾಪಿಟಲ್ಸ್ Delhi Capitals ನಡುವೆ ಪೈಪೋಟಿ ಮುಂದುವರಿದಿದೆ.

ಐಪಿಎಲ್ 2026 ರ ಪ್ಲೇಆಫ್ ವೇಳಾಪಟ್ಟಿ

  • ಮೇ 26: ಕ್ವಾಲಿಫೈಯರ್- 1, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್ – 7:30 ಸಂಜೆ
  • ಮೇ 27: ಎಲಿಮಿನೇಟರ್, ಸನ್‌ರೈಸರ್ಸ್ ಹೈದರಾಬಾದ್ vs ಇನ್ನೂ ನಿರ್ಧಾರವಾಗಿಲ್ಲ – 7:30 ಸಂಜೆ
  • ಮೇ 29: ಕ್ವಾಲಿಫೈಯರ್ 2 (ಎಲಿಮಿನೇಟರ್ ವಿಜೇತ vs ಕ್ವಾಲಿಫೈಯರ್ 1 ರಲ್ಲಿ ಸೋತ ತಂಡ) – 7:30 ಸಂಜೆ
  • ಮೇ 31: ಫೈನಲ್ (ಕ್ವಾಲಿಫೈಯರ್ 1 ರ ವಿಜೇತ vs ಕ್ವಾಲಿಫೈಯರ್ 2 ರ ವಿಜೇತ)