“ಉಡುಪಿ ಜಿಲ್ಲೆಯ ಮಾನವಿಕ ಶಿಕ್ಷಣ ಬೆಳಗುತ್ತಿರುವ ಮೇರು ವ್ಯಕ್ತಿತ್ವದ ಎಂಜಿಎಂ.ಪದವಿಪೂರ್ವ ವಿದ್ಯಾರ್ಥಿನಿ ಸುಮೇಧಾ ಶೆಣೈ ಸನ್ಮಾನ ಸಮಾರಂಭ”

ಮಾನವಿಕ ಶಿಕ್ಷಣ ಬೆಳಗುತ್ತಿರುವ ಮೇರು ವ್ಯಕ್ತಿತ್ವದ ಎಂಜಿಎಂ.ಪದವಿಪೂರ್ವ ಕಾಲೇಜು ಶಿಕ್ಷಣ ಅಂದರೆ ಕೇವಲ ಸೈನ್ಸ್ ಕಾಮಸ್೯ ಅನ್ನುವ ಅಬ್ಬರದ ಪ್ರಚಾರದ ಕಾಲದಲ್ಲೂ ಮಾನವಿಕ ಶಾಸ್ತ್ರ ಕೂಡ ನಮ್ಮ ಶಿಕ್ಷಣದ ಅವಿಭಾಜ್ಯ ಅಂಗ ಅನ್ನುವುದನ್ನು ಸಾಕ್ಷ್ಯೀಕರಿಸುತ್ತಿರುವ ಶಿಕ್ಷಣ ಸಂಸ್ಥೆ ಅನ್ನುವ ಕೀತಿ೯ ಉಡುಪಿ ಎಂಜಿಎಂ ಶಿಕ್ಷಣ ಸಂಸ್ಥೆಗಿದೆ.

ಪ್ರತಿ ವರುಷ ಫಲಿತಾಂಶ ಬಂದಾಗ ಉಡುಪಿ ಎಂಜಿಎಂ.ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಶ್ರೇಷ್ಠ ಸಾಧನೆ ದಾಖಲಿಸುತ್ತಾ ಬಂದಿರುವುದನ್ನು ನಾವು ಗಮನಿಸಿದ್ದೇವೆ.ಇಲ್ಲಿ ಕಲಿತಾ ವಿದ್ಯಾರ್ಥಿಗಳು ರಾಜ್ಯದ ಪ್ರತಿಷ್ಠಿತ ಕಲಾ ಕಾಲೇಜುಗಳಲ್ಲಿ ಅದರಲ್ಲೂ ಮುಖ್ಯವಾಗಿ ಕಾನೂನು ಮತ್ತು ಮಾಸ್ ಕಮ್ಯುನಿಕೇಷನ್ ನಂತಹ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಪದವಿ ಗಳಿಸಿ ಬಹು ಪ್ರತಿಷ್ಠಿತ ಹುದ್ದೆಗಳನ್ನು ಸ್ವೀಕರಿಸಿದ ಸಾಕಷ್ಟು ಉದಾಹರಣೆಗಳು ನಮ್ಮಮುಂದಿದೆ.
*ಇದನ್ನೆಲ್ಲಾ ಪುಷ್ಟಿಕರಿಸುವಂತೆ ಈ ಬಾರಿ ಪದವಿ ಪುಾವ೯ ಶಿಕ್ಷಣ ಇಲಾಖೆ ನಡೆಸಿದ ಪರೀಕ್ಷೆಯಲ್ಲಿ ಉಡುಪಿ ಎಂಜಿಎಂ.ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಕು.ಸುಮೇಧಾ ಶೆಣೈ ರಾಜ್ಯ ಮಟ್ಟದಲ್ಲಿ 10ನೇ Rankಗಳಿಸುವುದರೊಂದಿಗೆ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿ ಸಾಧನೆಗೈದಿರುವುದು ಎಂಜಿಎಂ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ಸಾಧನೆಗೆ ಸಂದ ಚಿನ್ನದ ಗರಿ.ಈ ಪ್ರತಿಭಾವಂತ ವಿದ್ಯಾರ್ಥಿನಿ ಸುಮೇಧಾ ಶೆಣೈ ಅವರನ್ನು ಉಡುಪಿ ಜಿಲ್ಲಾ ಆಡಳಿತ ವತಿಯಿಂದ ಜಿಲ್ಲೆಯ ಉಸ್ತುವಾರಿ ಸಚಿವರು ಸಂಮಾನಿಸಿ ಗೌರವಿಸಿರುವುದು ಮಾನವಿಕ ಶಾಸ್ತ್ರ ವಿಷಯಕ್ಕೆ ಪ್ರಾಪ್ತವಾದ ಅತೀ ದೊಡ್ಡ ಗೌರವ ಮಾತ್ರವಲ್ಲ ಈ ಸ್ಪಧಾ೯ತ್ಮಕ ಶೈಕ್ಷಣಿಕ ಜಗತ್ತಿನಲ್ಲಿ ಮಾನವಿಕ ಶಾಸ್ತ್ರದ ಕಲಿಕಾ ಮೌಲ್ಯ ಇನ್ನಷ್ಟು ಬೆಳಗಲಿ ಅನ್ನುವುದು ನಮ್ಮೆಲ್ಲರ ಹಾರೈಕೆ.:>ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿಯವರು ಉಡುಪಿ.

ಒಂದು ಶಿಕ್ಷಣ ಸಂಸ್ಥೆ ಪರಿಪೂರ್ಣ ವಿದ್ಯಾ ಸಂಸ್ಥೆಯ ಅನ್ನಿಸಿಕೊಳ್ಳ ಬೇಕಾದರೆ ಅಲ್ಲಿನ ವಿದ್ಯಾರ್ಥಿಗಳ ಅಭಿರುಚಿಗೆ ತಕ್ಕುದಾಗಿ ದಕ್ಕುವ ವಿಷಯಗಳು ಅಲ್ಲಿ ಲಭ್ಯವಿರ ಬೇಕು.ಈ ನಿಟ್ಟಿನಲ್ಲಿ ಉಡುಪಿ ಎಂಜಿಎಂ.ಕಾಲೇಜಿನ ಕ್ಯಾಂಪಸ್‌ನ ಒಳಗೆ ಸೈನ್ಸ್ ಕಾಮಸ೯ ಮಾತ್ರವಲ್ಲ ಅಷ್ಟೇ ಗುಣಮಟ್ಟದ ಸಂಪನ್ನತೆ ಹೊಂದಿರುವ ಉಪನ್ಯಾಸಕರು ವಿದ್ಯಾರ್ಥಿಗಳನ್ನು ಪಡೆದಿರುವ ಕಾರಣದಿಂದಲೇ ಕಲಾ ವಿಭಾಗಕ್ಕೆ ವಿದ್ಯಾರ್ಥಿಗಳ ಕೊರತೆ ಇಂದಿನ ತನಕ ಬಾಧಿಸಿಲ್ಲ ಮಾತ್ರವಲ್ಲ ಶ್ರೇಷ್ಠ ಪ್ರತಿಭಾವಂತ ವಿದ್ಯಾರ್ಥಿಗಳು ಜಿಲ್ಲೆ ಹೊರ ಜಿಲ್ಲೆಗಳಿಂದ ಕೂಡ ಎಂಜಿಎಂ. ಕಾಲೇಜಿನ ಕಲಾ ವಿಭಾಗವನ್ನೆ ಆಯ್ಕೆ ಮಾಡಿ ಕೊಂಡು ಬರುವ ಟ್ರೆಂಡ ಬೆಳೆಸಿಕೊಂಡು ಬಂದಿದೆ ಅನ್ನುವುದು ಎಂಜಿಎಂ.ಪದವಿಪೂರ್ವ ಕಾಲೇಜಿನ ಒಂದು ವಿಶಿಷ್ಟವಾದ ಗುಣ.