ಕಾರ್ಕಳ ಯಕ್ಷ ರಂಗಾಯಣ ಶಿಷ್ಟಾಚಾರವನ್ನು ತಪ್ಪದೇ ಪಾಲಿಸುತ್ತಿದೆ :ಆರೋಪಕ್ಕೆ ನಿರ್ದೇಶಕರ ಸ್ಪಷ್ಟೀಕರಣ

ಕಾರ್ಕಳ : ಮೇ.16-05-2026 ರಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾರ್ಕಳ ಯಕ್ಷ ರಂಗಾಯಣ ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರ ಉಲ್ಲಂಘನೆಮಾಡಿದೆ ಎನ್ನುವ ಪ್ರಸ್ತಾಪ ಶಾಸಕರು ಮಾಡಿದ್ದರು. ಆದರೆ ಯಕ್ಷ ರಂಗಾಯಣವು ಜಿಲ್ಲಾ ಮಟ್ಟದ ಎಲ್ಲಾ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರವನ್ನು ತಪ್ಪದೆ ಪಾಲಿಸಿದೆ ಎಂದು ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕರಾದ ಬಿ.ಆರ್. ವೆಂಕಟರಮಣ ಐತಾಳ್ ಸ್ಪಷ್ಟನೆ ನೀಡಿದ್ದಾರೆ

ಯಕ್ಷ ರಂಗಾಯಣದ ರೆಪರ್ಟರಿ ನಾಟಕಕ್ಕೆ ಸಂಬಂಧಿಸಿದಂತೆ ಕರಪತ್ರವನ್ನು ಪ್ರಕಟಿಸಲಾಗಿದ್ದು,ಸದರಿ ಕರಪತ್ರದಲ್ಲಿ ಇಲಾಖಾ ಸಚಿವರ ಸಂದೇಶವನ್ನು ಮತ್ತು ಪ್ರದರ್ಶನಕ್ಕೆ ಸಿದ್ದಗೊಂಡ ನಾಟಕದ ವಿವರ ಹಾಗೂ ಕಲಾವಿದರ ಮಾಹಿತಿಯನ್ನು ನೀಡಲಾಗಿದೆ. ಇದನ್ನು ರಾಜ್ಯದ ಇತರ 5 ರಂಗಾಯಣಗಳು ಪಾಲಿಸುತ್ತದೆ. ಈ ಹಿಂದೆ 2023 ರಲ್ಲಿ ಯಕ್ಷ ರಂಗಾಯಣದಲ್ಲಿ ಸಿದ್ಧಗೊಂಡ ಮೊದಲ ನಾಟಕ “ಅಮರಕ್ರಾಂತಿ” ಯ ಬಗ್ಗೆ ಕರಪತ್ರ ಸಿದ್ಧಪಡಿಸಲಾಗಿತ್ತು. ಅದರಲ್ಲಿಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ವಿ ಸುನಿಲ್ ಕುಮಾರ್ ಅವರ ಸಂದೇಶದೊಂದಿಗೆ ಪ್ರಕಟಿಸಲಾಗಿತ್ತು. ಅದೇ ಪರಂಪರೆ ಯಕ್ಷ ರಂಗಾಯಣದಲ್ಲಿ ಮುಂದುವರಿದಿದೆ ಎಂದು ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕರಾದ ಬಿ.ಆರ್. ವೆಂಕಟರಮಣ ಐತಾಳ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.