“ಮಹಾತ್ಮಾ ಗಾಂಧಿ ನರೇಗಾ” ಬದಲಿಗೆ ಜೂ. 1 ರಿಂದ “ವಿಬಿ-ಜಿ ರಾಮ್ ಜಿ”; ಏನೆಲ್ಲಾ ಬದಲಾವಣೆ? ಮಾಹಿತಿ ಇಲ್ಲಿದೆ

ಗ್ರಾಮೀಣ ಉದ್ಯೋಗ ನೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರವು 2005ರಲ್ಲಿ ಜಾರಿಗೆ ಬಂದಿದ್ದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ Mahatma Gandhi National Rural Employment Guarantee Act (MGNREGA/ನರೇಗಾ) ಕಾಯ್ದೆಯನ್ನು ರದ್ದುಗೊಳಿಸಿ, ಅದರ ಬದಲಿಗೆ ‘ವಿಕಸಿತ ಭಾರತ – ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)’- (VB-G RAM G) ಕಾಯ್ದೆ, 2025 ಅನ್ನು ಜಾರಿಗೆ ತಂದಿದೆ. ಅಂದರೆ ಈ ಹೊಸ ಕಾಯ್ದೆಯು ಗ್ರಾಮೀಣ ಭಾಗದ ಆರ್ಥಿಕತೆಯನ್ನು ಬಲಪಡಿಸುವ ಮತ್ತು 2047ರ ವೇಳೆಗೆ ‘ವಿಕಸಿತ ಭಾರತ’ ನಿರ್ಮಾಣದ ಗುರಿಯನ್ನು ಹೊಂದಿದೆ.

ಈ ಹೊಸ ಯೋಜನೆಯ ಪ್ರಮುಖ ಅಂಶಗಳು:

  • ಗ್ರಾಮೀಣ ಕುಟುಂಬಗಳಿಗೆ ವರ್ಷಕ್ಕೆ 125 ದಿನ ಉದ್ಯೋಗ ಖಾತರಿ
  • 15 ದಿನಗಳಲ್ಲಿ ಕೆಲಸ ಸಿಗದಿದ್ದರೆ ನಿರುದ್ಯೋಗ ಭತ್ಯೆ
  • ಜಲ ಸಂರಕ್ಷಣೆ, ಗ್ರಾಮೀಣ ರಸ್ತೆ, ಗೋದಾಮುಗಳಂತಹ ಶಾಶ್ವತ ಆಸ್ತಿಗಳ ನಿರ್ಮಾಣಕ್ಕೆ ಒತ್ತು
  • ಬಯೋಮೆಟ್ರಿಕ್ ಹಾಜರಾತಿ, ಜಿಪಿಎಸ್ GPS ಟ್ರ್ಯಾಕಿಂಗ್, ಕೃತಕ ಬುದ್ಧಿಮತ್ತೆ AI ಆಧಾರಿತ ಮೇಲ್ವಿಚಾರಣೆ
  • ಕೃಷಿ ಬಿತ್ತನೆ/ಕೊಯ್ಲು ಸಮಯದಲ್ಲಿ ಕಾಮಗಾರಿಗಳಿಗೆ 60 ದಿನ ವಿರಾಮ ನೀಡುವ ಅವಕಾಶ
  • ಕೇಂದ್ರ–ರಾಜ್ಯ ವೆಚ್ಚ ಹಂಚಿಕೆ ಸಾಮಾನ್ಯವಾಗಿ 60:40 ಮಾದರಿ

ಕಾರ್ಮಿಕರಿಗೆ ಮುಖ್ಯ ಲಾಭಗಳು

  • ಹಿಂದಿನ 100 ದಿನಗಳಿಗಿಂತ ಹೆಚ್ಚು ಉದ್ಯೋಗ
  • ವೇತನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ
  • ವೇತನ ವಿಳಂಬಕ್ಕೆ ಪರಿಹಾರ
  • ಡಿಜಿಟಲ್ ಜಾಬ್ ಕಾರ್ಡ್ ಮತ್ತು ಪಾರದರ್ಶಕತೆ ವ್ಯವಸ್ಥೆ

ರೈತರಿಗೆ ಲಾಭಗಳು

  • ಕೃಷಿ ಹಂಗಾಮಿನಲ್ಲಿ ಕಾರ್ಮಿಕರ ಕೊರತೆ ಕಡಿಮೆಯಾಗುತ್ತದೆ
  • ನೀರಾವರಿ ಮತ್ತು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ
  • ಗೋದಾಮು ಮತ್ತು ಮಾರುಕಟ್ಟೆ ಸಂಪರ್ಕ ಸುಧಾರಣೆ

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆ ವಿವರ
  • ರೇಷನ್ ಕಾರ್ಡ್
  • ಫೋಟೋ
  • ನಿವಾಸ ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ (ಅನ್ವಯಿಸಿದರೆ)

ನೋಂದಣಿ ಹೇಗೆ?

ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕುಟುಂಬದ ಸದಸ್ಯರನ್ನು ನೋಂದಾಯಿಸಿ “ಗ್ರಾಮೀಣ ರೋಜ್‌ಗಾರ್ ಗ್ಯಾರಂಟಿ ಕಾರ್ಡ್” ಪಡೆಯಬೇಕು. ನಂತರ ಕೆಲಸಕ್ಕಾಗಿ ಬೇಡಿಕೆ ಸಲ್ಲಿಸಬಹುದು.

ಇದಕ್ಕೆ ಸಂಬಂಧಿಸಿದಂತೆ ಕೆಲವು ರಾಜ್ಯಗಳಲ್ಲಿ ರಾಜಕೀಯ ಮತ್ತು ಕಾರ್ಮಿಕ ಸಂಘಟನೆಗಳ ವಿರೋಧವೂ ವ್ಯಕ್ತವಾಗಿದೆ. ಕೆಲವರು ಇದು MGNREGA ಯ ಹಕ್ಕು ಆಧಾರಿತ ವ್ಯವಸ್ಥೆಯನ್ನು ದುರ್ಬಲಗೊಳಿಸಬಹುದು ಎಂದು ಹೇಳುತ್ತಿದ್ದಾರೆ.