ಮಂಗಳೂರು ಲಿಫ್ಟ್ ಅವಘಡ: ಮಾರ್ಟ್ ಉದ್ಯೋಗಿ ದುರ್ಮರಣ

ಮಂಗಳೂರು: ನಗರದ ಕುಂಟಿಕಾನ ಪ್ರದೇಶದ ಮಾರ್ಟ್ ಒಂದರಲ್ಲಿ ಶನಿವಾರ ಸಂಜೆ ಸಂಭವಿಸಿದ ಲಿಫ್ಟ್ ಅವಘಡದಲ್ಲಿ ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಬೆಳಾಲು ಗ್ರಾಮದ ಪೂಂಜಕೆರೆ ನಿವಾಸಿ ನೌಫಾಲ್ Naufal (28) ಎಂದು ಗುರುತಿಸಲಾಗಿದೆ.

ಶನಿವಾರ ಸಂಜೆ ಮಾರ್ಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ನೌಫಾಲ್ ಲಿಫ್ಟ್ ಅವಘಡಕ್ಕೆ ಸಿಲುಕಿದರು. ತಕ್ಷಣ ಸಹೋದ್ಯೋಗಿಗಳು ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ, ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ. ನೌಫಾಲ್ ಅವಿವಾಹಿತರಾಗಿದ್ದು, ಅವರ ಅಕಾಲಿಕ ನಿಧನ ಕುಟುಂಬಸ್ಥರು ಹಾಗೂ ಸ್ನೇಹಿತರಲ್ಲಿ ದುಃಖ ಮೂಡಿಸಿದೆ.

ಈ ಸಂಬಂಧ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.