ಮಣಿಪಾಲ: ವಿಶ್ವ ಅಸ್ಥಿಸಂಧಿವಾತ ಜಾಗೃತಿ ಮಾಸದ ಅಂಗವಾಗಿ ಮುನಿಯಾಲ್ ಆಯುರ್ವೇದ ಆಸ್ಪತ್ರೆ ಮತ್ತು ಕುಟುಂಬ ಆರೋಗ್ಯ ಕೇಂದ್ರದ ಶಲ್ಯತಂತ್ರ ವಿಭಾಗ, ಕಾಯಚಿಕಿತ್ಸಾ ವಿಭಾಗ ಹಾಗೂ ಪಂಚಕರ್ಮ ವಿಭಾಗಗಳ ವತಿಯಿಂದ “ವೇದನಾಹರ ಕಲ್ಪ” ಉಚಿತ ನೋವು ನಿವಾರಕ ಆರೋಗ್ಯ ತಪಾಸಣಾ ಶಿಬಿರವನ್ನು ಮೇ 18 ರಿಂದ 23 ರವರೆಗೆ ಪ್ರತಿದಿನ ಬೆಳಿಗ್ಗೆ 9 ರಿಂದ ಅಪರಾಹ್ನ 4:30 ರವರೆಗೆ ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ಬೆನ್ನುನೋವು, ದೀರ್ಘಕಾಲದ ಬೆನ್ನುನೋವು, ಕುತ್ತಿಗೆ ನೋವು ಮತ್ತು ಬಿಗಿತ, ಮಾಂಸಖಂಡಗಳ ನೋವು ಮತ್ತು ಸೆಳೆತ, ಗಂಟು ನೋವು ಹಾಗೂ ಊತ, ಹಿಮ್ಮಡಿ ನೋವು, ಭುಜ ಮತ್ತು ಮಂಡಿ ನೋವು ಸೇರಿದಂತೆ ಅಸ್ಥಿಸಂಧಿವಾತ ಹಾಗೂ ಸ್ನಾಯು-ಎಲುಬು ಸಂಬಂಧಿತ ವಿವಿಧ ಸಮಸ್ಯೆಗಳಿಗೆ ವಿಶೇಷ ಆಯುರ್ವೇದ ಸಮಾಲೋಚನೆ ಮತ್ತು ಚಿಕಿತ್ಸೆ ನೀಡಲಾಗುತ್ತದೆ.
ಶಿಬಿರದ ಅಂಗವಾಗಿ ಉಚಿತ ಸಮಾಲೋಚನೆ, ಪಂಚಕರ್ಮ ಚಿಕಿತ್ಸೆಗಳು ಹಾಗೂ ಪ್ರಯೋಗಾಲಯ ಪರೀಕ್ಷೆಗಳಲ್ಲಿ 50% ರಿಯಾಯಿತಿ, ಔಷಧಿಗಳ ಮೇಲೆ 10% ರಿಯಾಯಿತಿ, ಫಿಸಿಯೋಥೆರಪಿ, ಅಕ್ಯುಪಂಕ್ಚರ್ ಚಿಕಿತ್ಸೆ ಮತ್ತು TENS ಚಿಕಿತ್ಸೆಯಲ್ಲಿ 20% ರಿಯಾಯಿತಿ, ಉಚಿತ ಆಹಾರ ಪದ್ಧತಿ ಸಮಾಲೋಚನೆ, ಉಚಿತ ಯೋಗ ಸಮಾಲೋಚನೆ, ರಿಯಾಯಿತಿ ದರದಲ್ಲಿ ಒಳರೋಗಿ ಚಿಕಿತ್ಸೆ ಹಾಗೂ ಕುಟುಂಬ ಆರೋಗ್ಯ ಕಾರ್ಡ್ ಮೇಲೆ 50% ರಿಯಾಯಿತಿ ನೀಡಲಾಗುತ್ತದೆ.
ಶಿಬಿರವನ್ನು ಉಡುಪಿಯ ಅಜ್ಜರಕಾಡಿನಲ್ಲಿರುವ ಮುನಿಯಾಲ್ ಆಯುರ್ವೇದ ಕುಟುಂಬ ಚಿಕಿತ್ಸಾಲಯ ಮತ್ತು ಮಣಿಪಾಲದ ಶಿವಳ್ಳಿ ಕೈಗಾರಿಕಾ ಪ್ರದೇಶದ ಮುನಿಯಾಲ್ ಆಯುರ್ವೇದ ಆಸ್ಪತ್ರೆಯಲ್ಲಿ ನಡೆಸಲಾಗುವುದು.
ಸಾರ್ವಜನಿಕರು ಈ ಆರೋಗ್ಯ ಉಪಕ್ರಮದ ಗರಿಷ್ಠ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಂಘಟಕರು ವಿನಂತಿಸಿದ್ದಾರೆ. ಶಿಬಿರದ ಕುರಿತು ಹೆಚ್ಚಿನ ಮಾಹಿತಿಗಾಗಿ 8123403233 ಅನ್ನು ಸಂಪರ್ಕಿಸಿ.

















