ಮೂಡ್ಲಕಟ್ಟೆಯ ಐ ಎಂ ಜೆ ಕ್ವಾಂಟಮ್ ತಂತ್ರಜ್ಞಾನ ಸಂಶೋಧನಾ ಸಂಸ್ಥೆಗೆ ಸಚಿವರ ಭೇಟಿ

ಕುಂದಾಪುರ: ಕರ್ನಾಟಕ ಸರಕಾರದಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಮಾನ್ಯ ಶ್ರೀ ಎನ್. ಎಸ್. ಬೋಸರಾಜು ಅವರು 2026 ಮೇ 13ರಂದು ಐ ಎಂ ಜೆ ಸಂಶೋಧನಾ ಸಂಸ್ಥೆಯಲ್ಲಿರುವ ಕ್ವಾಂಟಮ್ ಕಂಪ್ಯೂಟಿಂಗ್ ಪ್ರಯೋಗಾಲಯ, ಡೆಲ್ಟಾ-Q ಗೆ ಭೇಟಿ ನೀಡಿದರು.

ಭೇಟಿ ವೇಳೆ ಮಾನ್ಯ ಸಚಿವರು ಸಂಸ್ಥೆಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಅಯಾನ್-ಟ್ರ್ಯಾಪ್ ಆಧಾರಿತ 16-ಕ್ವಿಬಿಟ್ ಕ್ವಾಂಟಮ್ ಪ್ರೊಸೆಸರ್‌ನ ಪ್ರಾಯೋಗಿಕ ವ್ಯವಸ್ಥೆಯನ್ನು ವೀಕ್ಷಿಸಿದರು.

ಮಾನ್ಯ ಸಚಿವರು ಸಂಸ್ಥೆಯ ಸಂಶೋಧನಾ ದೃಷ್ಟಿಕೋನ ಮತ್ತು ನಡೆಯುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದರು. ಗ್ರಾಮೀಣ ಕರ್ನಾಟಕದಲ್ಲಿ ಇಂತಹ ವಿಶಿಷ್ಟ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಉಪಕ್ರಮವನ್ನು ಯಶಸ್ವಿಯಾಗಿ ಸ್ಥಾಪಿಸಲು ಶುಭಾಶಯಗಳನ್ನು ತಿಳಿಸಿದರು. ಮಹಾನಗರಗಳ ಹೊರಗೆ ಮುಂದುವರಿದ ವೈಜ್ಞಾನಿಕ ಸಂಶೋಧನೆ ಮತ್ತು ನಾವೀನ್ಯತೆಯ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು.ಕರ್ನಾಟಕದಲ್ಲಿ

ಕರ್ನಾಟಕದಲ್ಲಿ ಜಾಗತಿಕವಾಗಿ ಪ್ರಸ್ತುತವಾದ ಕ್ವಾಂಟಮ್ ತಂತ್ರಜ್ಞಾನ ಕಾರ್ಯಕ್ರಮವನ್ನು ರೂಪಿಸುವ ಸಂಸ್ಥೆಯ ಪ್ರಯತ್ನ ಹೊಗಳಿದರು.

ಸಚಿವರೊಂದಿಗೆ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಕರ್ನಾಟಕ ವಿಧಾನಸಭೆಯ ಮಾಜಿ ಸದಸ್ಯ ಜಯಪ್ರಕಾಶ್ ಹೆಗ್ಡೆ, ಸ್ಟೆಪ್ಸ್ ಕರ್ನಾಟಕದ ವಿಜ್ಞಾನ ಮತ್ತು ತಂತ್ರಜ್ಞಾನ ನಿರ್ದೇಶಕ ಶಿವಾನಂದ ಪ್ರಭು, ಉದ್ಯಮಿ ಮುನಿಯಾಲು ಉದಯ ಕುಮಾರ್ ಶೆಟ್ಟಿ,ಐ ಎಂ ಜೆ ಶಿಕ್ಷಣ ಸಂಸ್ಥೆ ಗಳ ಅಧ್ಯಕ್ಷರಾದ ಶ್ರೀ ಸಿದ್ಧಾರ್ಥ ಜೆ ಶೆಟ್ಟಿ, ಹಾಗೂ ಐ ಎಂ ಜೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ .ಕೆ. ಟಿ. ಸತ್ಯಜಿತ್, ಐ ಎಂ ಜೆ ವಿದ್ಯಾಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಡಾ ಎಸ್ ಎನ್ ಭಟ್ ಮತ್ತು ಎಂ ಐ ಟಿ ಮೂಡ್ಲಕಟ್ಟೆ ಪ್ರಾಂಶುಪಾಲ ಡಾ ರಾಮಕೃಷ್ಣ ಹೆಗಡೆ, ಐ ಎಂ ಜೆ ಐ ಎಸ್ ಸಿ ಪ್ರಾಂಶುಪಾಲೆ ಡಾ. ಪ್ರತಿಭಾ ಪಟೇಲ್ ಉಪಸ್ಥಿತರಿದ್ದರು.

ಇದೇ ವೇಳೆ ಡಾ. ಕೆ. ಟಿ. ಸತ್ಯಜಿತ್ ಅವರು 2026–2030ರ ಅವಧಿಗೆ ಐ ಎಂ ಜೆ ಐ ಆರ್ ಕ್ವಾಂಟಮ್ ಕಂಪ್ಯೂಟಿಂಗ್ ಕಾರ್ಯಕ್ರಮದ ಕಾರ್ಯಯೋಜನೆಯನ್ನು ಮಂಡಿಸಿದರು.

ಗ್ರಾಮೀಣ ಕರ್ನಾಟಕದಲ್ಲಿ ಮುಂದುವರಿದ ವೈಜ್ಞಾನಿಕ ಸಂಶೋಧನಾ ಮೂಲಸೌಕರ್ಯದ ಬೆಳವಣಿಗೆಯಲ್ಲಿ ಈ ಭೇಟಿ ಪ್ರಮುಖ ಮೈಲಿಗಲ್ಲಾಗಿದೆ. ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯದ ಉದಯೋನ್ಮುಖ ಪಾತ್ರವನ್ನು ಇದು ಎತ್ತಿ ತೋರಿಸುತ್ತದೆ.