ಎಸ್.ಎಸ್.ಎಲ್.ಸಿ ಪರೀಕ್ಷೆ-2: ನಿಷೇಧಾಜ್ಞೆ ಜಾರಿ

ಉಡುಪಿ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವತಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ-2 ಪರೀಕ್ಷೆಗಳು ಮೇ 18 ರಿಂದ 25 ರ ವರೆಗೆ ಜಿಲ್ಲೆಯ ಒಟ್ಟು 5 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಗಳು ಸುಸೂತ್ರವಾಗಿ, ದೋಷರಹಿತವಾಗಿ ನಡೆಸಲು ಮತ್ತು ಪರೀಕ್ಷೆ ಸಂದರ್ಭದಲ್ಲಿ ನಡೆಯಬಹುದಾದ ಎಲ್ಲಾ ರೀತಿಯ ಅವ್ಯವಹಾರಗಳನ್ನು ತಡೆಗಟ್ಟುವ ಸಲುವಾಗಿ ನಿಗದಿಪಡಿಸಿದ ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಲೂ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಹಾಗೂ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ, ಭಾರತೀಯ […]

ಶ್ರೀ ಶಾರದಾ ಟ್ರೈನಿಂಗ್ ಇನ್‌ಸ್ಟಿಟ್ಯೂಟ್: ಮೇ.18 ರಿಂದ ವಿಶೇಷ ಗ್ರಾಮರ್ ತರಬೇತಿ: ನಿಮ್ಮ ಮಕ್ಕಳ ಇಂಗ್ಲೀಷ್ ವ್ಯಾಕರಣ ಜ್ಞಾನವನ್ನು ಉತ್ತೇಜಿಸಲು ಬೆಸ್ಟ್ ಅವಕಾಶ

ಮಣಿಪಾಲ: ಮಕ್ಕಳಲ್ಲಿ ಇಂಗ್ಲಿಷ್ ವ್ಯಾಕರಣ ಕೌಶಲ್ಯವನ್ನು ಬೆಳೆಸುವ ಉದ್ದೇಶದಿಂದ ಶ್ರೀ ಶಾರದಾ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ವತಿಯಿಂದ ವಿಶೇಷ “Polish Your Grammar With Us” ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 10ರಿಂದ 14 ವರ್ಷದ ಮಕ್ಕಳಿಗಾಗಿ ರೂಪಿಸಲಾದ ಈ ಮನರಂಜನಾತ್ಮಕ ಹಾಗೂ ಸಂವಾದಾತ್ಮಕ ತರಬೇತಿ ಶಿಬಿರವು ಮೇ 18 ಮೇ. 23 ರ ವರೆಗೆ ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಣಿಪಾಲದ ಕ್ರಿಸ್ಟಲ್ ಬಿಜ್‌ಹಬ್‌ನಲ್ಲಿ ತರಗತಿಗಳು ನಡೆಯಲಿವೆ. ಮಕ್ಕಳಲ್ಲಿ ಇಂಗ್ಲಿಷ್ ವ್ಯಾಕರಣ ಜ್ಞಾನ, ಆತ್ಮವಿಶ್ವಾಸ […]

ಕೊಡವೂರು ಮಹಾರುದ್ರಯಾಗ: ವೈಭವದ ಹಸಿರು ಹೊರೆಕಾಣಿಕೆ ಮೆರವಣಿಗೆ

ಉಡುಪಿ: ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥ, ನಾಡಿನ ಜನರ ಸುಭೀಕ್ಷೆಗಾಗಿ ಮೇ 14ರಿಂದ 19ರವರೆಗೆ ನಡೆಯಲಿರುವ ಮಹಾರುದ್ರಯಾಗದ ಪ್ರಯುಕ್ತ ಅದ್ದೂರಿ ಹಸಿರು ಹೊರೆಕಾಣಿಕೆ ಮೆರವಣಿಗೆ ಗುರುವಾರ ಸಂಜೆ ಅದ್ಧೂರಿಯಾಗಿ ನಡೆಯಿತು.ಮಲ್ಪೆ ಅಯ್ಯಪ್ಪ ಮಂದಿರದಲ್ಲಿ ಬ್ರಹ್ಮರ್ಶಿ ಆನಂದ ಸಿದ್ದ ಪೀಠದ ಸಂಸ್ಥಾಪಕರಾದ ಶ್ರೀ ಮಹರ್ಷಿ ಆನಂದ ಗುರೂಜಿ ಪೂಜೆ ಸಲ್ಲಿಸಿ, ಬಳಿಕ ಕೇಸರಿ ಬಾವುಟ ಹಾರಿಸುವುದರ ಮೂಲಕ ಹಸಿರು ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.ಬಳಿಕ ಆರಂಭಗೊಂಡ ವೈಭವದ ಮೆರವಣಿಗೆ ಕೊಡುವೂರು […]

ಬ್ಯಾಂಕ್ ಮ್ಯಾನೇಜರ್ ಕರೆ ಬಂದಾಗ ಕಾದಿತ್ತು ಶಾಕಿಂಗ್ ನ್ಯೂಸ್: ಗೊತ್ತೇ ಆಗದಂತೆ ಕಾಫಿ ನಾಡಿನ ಮಹಿಳೆಯ ₹18.24 ಲಕ್ಷ ಮಂಗಮಾಯ ಮಾಡಿದ ಸೈಬರ್ ಕಳ್ಳರು

ಚಿಕ್ಕಮಗಳೂರು: ಡಿಜಿಟಲ್ ಯುಗದಲ್ಲಿ ಮೊಬೈಲ್‌ಗೆ ಬರುವ ಓಟಿಪಿಯೇ ಭದ್ರತೆ ಎಂದು ನಂಬಿದ್ದರೆ ಅದು ಅಪಾಯಕಾರಿಯಾಗಬಹುದು ಎಂಬುದನ್ನು ಚಿಕ್ಕಮಗಳೂರಿನಲ್ಲಿ ನಡೆದ ಭಾರೀ ಸೈಬರ್ ವಂಚನೆ ಪ್ರಕರಣ ಮತ್ತೊಮ್ಮೆ ಸಾಬೀತುಪಡಿಸಿದೆ. ನಗರದ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯಿಂದ ಬರೋಬ್ಬರಿ ₹18.24 ಲಕ್ಷ ಹಣ ಕಳ್ಳತನವಾಗಿದ್ದು, ಹಣ ಡೆಬಿಟ್ ಆದ ಕುರಿತಾಗಿ ಒಂದೇ ಒಂದು SMS ಅಥವಾ OTP ಕೂಡ ಅವರ ಮೊಬೈಲ್‌ಗೆ ಬಂದಿಲ್ಲ. ಗೊತ್ತಾಗದಂತೆ ಇಷ್ಟು ಹಣ ಮಾಯವಾದ ಪ್ರಕರಣ ರಾಜ್ಯದಲ್ಲೇ ಅಪರೂಪದ್ದಾಗಿದೆ. ನಗರದ ಐಡಿಎಫ್‌ಸಿ ಬ್ಯಾಂಕ್ ಖಾತೆ ಹೊಂದಿದ್ದ ಮಹಿಳೆ […]

ದೊಡ್ಡಣಗುಡ್ಡೆಯಲ್ಲಿ ಬೃಹತ್ ಮಾವು ಮೇಳಕ್ಕೆ ಚಾಲನೆ

ಉಡುಪಿ: ರಾಮನಗರ ಜಿಲ್ಲಾ ಮಾವು ಮತ್ತು ತೋಟದ ಬೆಳೆಗಾರರ ಮಾರಾಟ ಸಂಘದ ವತಿಯಿಂದ ಉಡುಪಿಯ ದೊಡ್ಡಣಗುಡ್ಡೆ ತೋಟಗಾರಿಕೆ ಇಲಾಖೆಯ ರೈತ ಸೇವಾ ಕೇಂದ್ರದ ಆವರಣದಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ವಿವಿಧ ಮಾವಿನ ತಳಿಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಇಂದು ಚಾಲನೆ ನೀಡಲಾಯಿತು. ಮಲ್ಲಿಕಾ, ಕೇಸರ್, ಇಮಾಮ್ ಪಸಂದ್, ರಸಪುರಿ, ಸಿಂಧೂರ, ಸುಂದರಿ, ಆಲ್ಫೋನ್ಸೊ, ತೋತಾಪುರಿ, ಕಾಲಪ್ಪಾಡಿ, ಸಕ್ಕರೆಗುತ್ತಿ, ಮಲಗೋವಾ, ದಸೇರಿ ಮೊದಲಾದ ತಳಿಗಳ ಮಾವುಗಳ ಪ್ರದರ್ಶನ ಗಮನಸೆಳೆಯಿತು. ಮೊದಲ ದಿನವೇ ಗ್ರಾಹಕರು ಮುಗಿಬಿದ್ದು ಮಾವುಗಳನ್ನು ಖರೀದಿಸಿದರು. […]