ನಿಮ್ಮ ಮಕ್ಕಳನ್ನು ಇನ್ನಷ್ಟು ಸ್ಮಾರ್ಟ್ ಮಾಡುವ MSDC ಯ ತಾಂತ್ರಿಕ ಸಮ್ಮರ್ ಕ್ಯಾಂಪ್ ಗಳು: ಆಸಕ್ತರು ಖಂಡಿತ ಮಿಸ್ ಮಾಡ್ಕೊಬೇಡಿ

ಉಡುಪಿ: ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಜ್ಞಾನ, ಸೃಜನಶೀಲತೆ ಹಾಗೂ ಕೌಶಲ್ಯಾಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವತಿಯಿಂದ ಮೇ 11ರಿಂದ  ವಿವಿಧ ಸಮರ್ ಕ್ಯಾಂಪ್‌ಗಳನ್ನು ಆಯೋಜಿಸಲಾಗಿದೆ. ಈ ಶಿಬಿರ ಶಾಲಾ ವಿದ್ಯಾರ್ಥಿಗಳಿಗೆ ಹೊಸ ಕಲಿಕೆಯ ಅನುಭವ ನೀಡಲಿವೆ.

ಏನೇನಿದೆ ಶಿಬಿರದಲ್ಲಿ?

ಶಿಬಿರಗಳಲ್ಲಿ ‘ಮಾಸ್ಟರಿಂಗ್ ಜನರೇಟಿವ್ AI ಟೂಲ್ಸ್’, ‘STEM IoT ಕ್ಯಾಂಪ್’, ‘ನೆಕ್ಸ್ಟ್‌ಜೆನ್ ರೋಬೋಟಿಕ್ಸ್ ಕ್ಯಾಂಪ್’, ‘ರೆಸಿನ್ ಆರ್ಟ್ ಸಮರ್ ಕ್ಯಾಂಪ್’ ಹಾಗೂ ‘ಆರ್ಟ್ಸ್ & ಕ್ರಾಫ್ಟ್ ಸಮರ್ ಕ್ಯಾಂಪ್’ ಸೇರಿವೆ.

ಜನರೇಟಿವ್ AI ತರಬೇತಿಯಲ್ಲಿ ChatGPT, Gemini ಸೇರಿದಂತೆ ವಿವಿಧ AI ಉಪಕರಣಗಳ ಬಳಕೆ, ಪ್ರಾಂಪ್ಟ್ ಎಂಜಿನಿಯರಿಂಗ್, ವೀಡಿಯೋ ಹಾಗೂ ಆಡಿಯೋ ಸೃಷ್ಟಿ, AI ನೈತಿಕತೆ ಮತ್ತು ಸುರಕ್ಷತೆ ಕುರಿತು ತರಬೇತಿ ನೀಡಲಾಗುತ್ತದೆ. STEM IoT ಕ್ಯಾಂಪ್‌ನಲ್ಲಿ IoT, LED ಸರ್ಕ್ಯೂಟ್, ಸ್ಮಾರ್ಟ್ ಸ್ಟ್ರೀಟ್ ಲೈಟ್ಸ್ ಹಾಗೂ ಆಟೋಮೇಷನ್ ಕುರಿತ ಪ್ರಾಯೋಗಿಕ ತರಬೇತಿ ನಡೆಯಲಿದೆ.

ರೋಬೋಟಿಕ್ಸ್ ಕ್ಯಾಂಪ್‌ನಲ್ಲಿ ಮೈಕ್ರೋಕಂಟ್ರೋಲರ್, ಕೋಡಿಂಗ್, ಸೆನ್ಸರ್ ಹಾಗೂ ಆ್ಯಕ್ಟ್ಯುವೇಟರ್‌ಗಳ ಕುರಿತು ತಿಳಿಸಿ ವಿದ್ಯಾರ್ಥಿಗಳಿಂದ ಕಾರ್ಯನಿರ್ವಹಿಸುವ ರೋಬೋ ನಿರ್ಮಾಣ ಮಾಡಿಸಲಾಗುತ್ತದೆ. ರೆಸಿನ್ ಆರ್ಟ್ ಹಾಗೂ ಆರ್ಟ್ಸ್ & ಕ್ರಾಫ್ಟ್ ಶಿಬಿರಗಳಲ್ಲಿ ಸೃಜನಾತ್ಮಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಸಮಯ ಯಾವಾಗ?ಯಾರು ಭಾಗವಹಿಸಬಹುದು?

6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಜೂನಿಯರ್ ಬ್ಯಾಚ್ ಹಾಗೂ 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸೀನಿಯರ್ ಬ್ಯಾಚ್ ವ್ಯವಸ್ಥೆ ಮಾಡಲಾಗಿದೆ. AI, STEM ಹಾಗೂ ರೋಬೋಟಿಕ್ಸ್ ತರಗತಿಗಳು ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ನಡೆಯಲಿದ್ದು, ಆರ್ಟ್ ಮತ್ತು ಕ್ರಾಫ್ಟ್ ತರಗತಿಗಳು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿವೆ.

ಹೆಚ್ಚಿನ ಮಾಹಿತಿಗಾಗಿ 8123165069 ಹಾಗೂ 7349780581 ಸಂಖ್ಯೆಗಳ ಸಂಪರ್ಕಿಸಿ