ಮಣಿಪಾಲ ಎಂಐಟಿಗೆ ಪ್ರತಿಷ್ಠಿತ ಸಿಎಫ್‌ಎ ಇನ್‌ಸ್ಟಿಟ್ಯೂಟ್’ನ ಮಾನ್ಯತೆ

ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯ ಅಂಗಸಂಸ್ಥೆ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು (ಎಂಐಟಿ), ಪ್ರತಿಷ್ಠಿತ ಸಿಎಫ್‌ಎ ಇನ್‌ಸ್ಟಿಟ್ಯೂಟ್ ವಿಶ್ವವಿದ್ಯಾಲಯ ಅಫಿಲಿಯೇಷನ್ ಕಾರ್ಯಕ್ರಮ (ಯುಎಪಿ) ಸರಣಿಗೆ ಸೇರಿದ ಭಾರತದ ಮೊದಲ ಮತ್ತು ಏಕೈಕ ಎಂಜಿನಿಯರಿಂಗ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಾಗತಿಕ ಮಟ್ಟದಲ್ಲಿ ಹಣಕಾಸು ಮತ್ತು ಹೂಡಿಕೆ ಕ್ಷೇತ್ರದಲ್ಲಿ ಅತ್ಯುನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಸಿಎಫ್‌ಎ ಇನ್‌ಸ್ಟಿಟ್ಯೂಟ್‌ನೊಂದಿಗೆ ಕೈಜೋಡಿಸಿರುವುದು ಎಂಐಟಿಯ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಎಂಜಿನಿಯರಿಂಗ್ ಶಿಕ್ಷಣದ ಜತೆಗೆ […]

ಜಗತ್ತಿನ ಸೇವೆಯಲ್ಲಿ ರೆಡ್ ಕ್ರಾಸ್ ಅನನ್ಯ: ಡಾ. ಅಶೋಕ್

ಉಡುಪಿ: ಅಂತರಾಷ್ಟ್ರೀಯ ರೆಡ್‌ಕ್ರಾಸ್ ಕಳೆದ ಒಂದೂವರೆ ಶತಮಾನಗಳಿಂದ ಜಗತ್ತಿನ ವಿವಿಧೆಡೆ ಮಾನವೀಯ ಸೇವೆ ಸಲ್ಲಿಸಿದೆ. ಪ್ರಕೃತಿ ವಿಕೋಪ ಮತ್ತು ಯುದ್ಧ ಸಂದರ್ಭದಲ್ಲಿ ಅದು ಸಲ್ಲಿಸಿದ ಸೇವೆ ಅನನ್ಯವಾದುದು. ಈ ದೃಷ್ಟಿಯಿಂದಲೇ ಅರ್ಹವಾಗಿಯೇ ನಾಲ್ಕು ಬಾರಿ ನೊಬೆಲ್ ಪ್ರಶಸ್ತಿ ಪಡೆದಿದೆ. ಉಡುಪಿ ಜಿಲ್ಲಾ ರೆಡ್‌ಕ್ರಾಸ್ ರಾಜ್ಯದಲ್ಲೆ ಪ್ರತಿಷ್ಠಿತವಾಗಿದೆ ಎಂದು ಜಿಲ್ಲಾ ರೆಡ್‌ಕ್ರಾಸ್ ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ. ಹೇಳಿದರು. ಅವರು ಜಿಲ್ಲಾ ರೆಡ್‌ಕ್ರಾಸ್ ಘಟಕದಲ್ಲಿ ರೆಡ್‌ಕ್ರಾಸ್ ದಿನಾಚರಣೆಯ ಅಂಗವಾಗಿ ರೆಡ್‌ಕ್ರಾಸ್ ಸ್ಥಾಪಕ ಹೆನ್ರಿ ಡ್ಯುನಾಂಟ್ ಅವರ ಪ್ರತಿಮೆಗೆ […]

ನಿಮ್ಮ ಮಕ್ಕಳನ್ನು ಇನ್ನಷ್ಟು ಸ್ಮಾರ್ಟ್ ಮಾಡುವ MSDC ಯ ತಾಂತ್ರಿಕ ಸಮ್ಮರ್ ಕ್ಯಾಂಪ್ ಗಳು: ಆಸಕ್ತರು ಖಂಡಿತ ಮಿಸ್ ಮಾಡ್ಕೊಬೇಡಿ

ಉಡುಪಿ: ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಜ್ಞಾನ, ಸೃಜನಶೀಲತೆ ಹಾಗೂ ಕೌಶಲ್ಯಾಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವತಿಯಿಂದ ಮೇ 11ರಿಂದ  ವಿವಿಧ ಸಮರ್ ಕ್ಯಾಂಪ್‌ಗಳನ್ನು ಆಯೋಜಿಸಲಾಗಿದೆ. ಈ ಶಿಬಿರ ಶಾಲಾ ವಿದ್ಯಾರ್ಥಿಗಳಿಗೆ ಹೊಸ ಕಲಿಕೆಯ ಅನುಭವ ನೀಡಲಿವೆ. ಏನೇನಿದೆ ಶಿಬಿರದಲ್ಲಿ? ಶಿಬಿರಗಳಲ್ಲಿ ‘ಮಾಸ್ಟರಿಂಗ್ ಜನರೇಟಿವ್ AI ಟೂಲ್ಸ್’, ‘STEM IoT ಕ್ಯಾಂಪ್’, ‘ನೆಕ್ಸ್ಟ್‌ಜೆನ್ ರೋಬೋಟಿಕ್ಸ್ ಕ್ಯಾಂಪ್’, ‘ರೆಸಿನ್ ಆರ್ಟ್ ಸಮರ್ ಕ್ಯಾಂಪ್’ ಹಾಗೂ ‘ಆರ್ಟ್ಸ್ & ಕ್ರಾಫ್ಟ್ ಸಮರ್ ಕ್ಯಾಂಪ್’ ಸೇರಿವೆ. ಜನರೇಟಿವ್ AI […]

ಸಲೂನ್ ಗೆ ಬಂದು ನೀಟಾಗಿ ಕಟ್ಟಿಂಗ್ ಮಾಡಿಸಿಕೊಂಡ ಕಪಿರಾಯ: ಕೋತಿಯ ಹೇರ್ ಕಟ್ ಚೇಷ್ಟೆಗೆ ಜನ ದಿಲ್ ಖುಷ್ !

ಚಾಮರಾಜನಗರ: ಜಿಲ್ಲೆಯ ಸಂತೇಮರಹಳ್ಳಿಯಲ್ಲಿ ನಡೆದ ಅಪರೂಪದ ಕೋತಿಪ್ರಸಂಗವೊಂದು ಸ್ಥಳೀಯರನ್ನೇ ಅಚ್ಚರಿ ಮತ್ತು ಖುಷಿಗೆ ಕಾರಣವಾಗಿದೆ. ಸಾಮಾನ್ಯವಾಗಿ ಮನುಷ್ಯರು ಮಾತ್ರ ಭೇಟಿ ನೀಡುವ ಹೇರ್ ಕಟಿಂಗ್ ಸಲೂನ್‌ಗೆ ಈ ಬಾರಿ ಅತಿಥಿಯಾಗಿ ಬಂದಿದ್ದು ಕೋತಿಯೊಂದು ಬಂದು, ಹೇರ್ ಕಟ್ ಮಾಡಿಸಿಕೊಂಡು ಹೋದ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಸಂತೇಮರಹಳ್ಳಿಯ ‘ದೇವು ಮೆನ್ಸ್ ಸಲೂನ್’ ಬಳಿ ಕಳೆದ ಕೆಲವು ದಿನಗಳಿಂದ ಈ ಮಂಗ ಓಡಾಡುತ್ತಿತ್ತಂತೆ. ಆದರೆ ಇತ್ತೀಚೆಗೆ ಅದು ನೇರವಾಗಿ ಸಲೂನ್ ಒಳಗೆ ಪ್ರವೇಶಿಸಿ ಕನ್ನಡಿಯ […]

ರೈಲ್ವೆಯಲ್ಲಿ 11,127 ಹುದ್ದೆಗಳ ಭರ್ಜರಿ ನೇಮಕಾತಿ; ಅರ್ಜಿ ಸಲ್ಲಿಸುವ ವಿವರ ಇಲ್ಲಿದೆ

ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (RRB) 2026ನೇ ಸಾಲಿನ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ದೇಶಾದ್ಯಂತ ಒಟ್ಟು 11,127 ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮೇ 15ರಿಂದ ಆರಂಭವಾಗಿ ಜೂನ್ 14ರವರೆಗೆ ನಡೆಯಲಿದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ SSLC ಉತ್ತೀರ್ಣರಾಗಿರಬೇಕು. ಜೊತೆಗೆ ಸಂಬಂಧಿತ ಟ್ರೇಡ್‌ಗಳಲ್ಲಿ ITI ಪೂರ್ಣಗೊಳಿಸಿರುವವರು ಅಥವಾ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ/ಪದವಿ ಪಡೆದವರೂ ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳ ವಯೋಮಿತಿ 18ರಿಂದ 30 […]