ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (RRB) 2026ನೇ ಸಾಲಿನ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ದೇಶಾದ್ಯಂತ ಒಟ್ಟು 11,127 ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮೇ 15ರಿಂದ ಆರಂಭವಾಗಿ ಜೂನ್ 14ರವರೆಗೆ ನಡೆಯಲಿದೆ.
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ SSLC ಉತ್ತೀರ್ಣರಾಗಿರಬೇಕು. ಜೊತೆಗೆ ಸಂಬಂಧಿತ ಟ್ರೇಡ್‌ಗಳಲ್ಲಿ ITI ಪೂರ್ಣಗೊಳಿಸಿರುವವರು ಅಥವಾ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ/ಪದವಿ ಪಡೆದವರೂ ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳ ವಯೋಮಿತಿ 18ರಿಂದ 30 ವರ್ಷಗಳ ನಡುವೆ ಇರಬೇಕು. ಮೀಸಲಾತಿ ವರ್ಗದವರಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಲಭ್ಯವಿರುತ್ತದೆ.
ಆಯ್ಕೆ ಪ್ರಕ್ರಿಯೆಯಲ್ಲಿ CBT-1, CBT-2, CBAT (Aptitude Test), ದಾಖಲೆ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ಸೇರಿ ಹಲವು ಹಂತಗಳು ಇರಲಿವೆ. ವಿಶೇಷವಾಗಿ ALP ಹುದ್ದೆಗೆ ಅಭ್ಯರ್ಥಿಗಳ ದೃಷ್ಟಿ ಸಾಮರ್ಥ್ಯ ‘A-1’ ವೈದ್ಯಕೀಯ ಮಾನದಂಡಕ್ಕೆ ಅನುಗುಣವಾಗಿರಬೇಕು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭಿಕವಾಗಿ ರೂ.19,900 ಮೂಲ ವೇತನದೊಂದಿಗೆ DA, HRA ಹಾಗೂ ರನ್ನಿಂಗ್ ಅಲವಾನ್ಸ್ ಸೇರಿ ತಿಂಗಳಿಗೆ ಅಂದಾಜು ರೂ.35,000 ರಿಂದ ರೂ.45,000ರವರೆಗೆ ವೇತನ ದೊರೆಯಲಿದೆ.
ಅಭ್ಯರ್ಥಿಗಳು ಸಂಬಂಧಿತ RRB ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ.

















