ಮಣಿಪಾಲ: ಮಕ್ಕಳ ಹಾಗೂ ವಯಸ್ಕರಿಗಾಗಿ ವಿಶೇಷವಾಗಿ ರೂಪಿಸಿರುವ “ಸಮರ್ ಕ್ರಿಯೇಟಿವ್ ಕ್ಯಾಂಪ್” ಅನ್ನು ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ಹಾಗೂ ಡ್ರೀಮ್ಝೋನ್ ಸ್ಕೂಲ್ ಆಫ್ ಕ್ರಿಯೇಟಿವ್ ಸ್ಟಡೀಸ್ ಸಂಯುಕ್ತವಾಗಿ ಮೇ 11ರಿಂದ 22 ರವರೆಗೆ ಮಣಿಪಾಲದ ಡಾ. ಟಿಎಂಎ ಪೈ ಪಾಲಿಟೆಕ್ನಿಕ್ ಕ್ಯಾಂಪಸ್ ಈಶ್ವರ್ ನಗರದಲ್ಲಿ ಆಯೋಜಿಸಿದೆ.
ಸೃಜನಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ “ಯಾರ್ನ್ ಕ್ರಾಫ್ಟ್ಸ್ & ಕ್ರೋಶೆ” ಹಾಗೂ “ಫ್ಯಾಬ್ರಿಕ್ ಪೇಂಟಿಂಗ್” ಸೇರಿದಂತೆ ವಿವಿಧ ಕಲಾತ್ಮಕ ಚಟುವಟಿಕೆಗಳನ್ನು ಕಲಿಸಲಾಗುತ್ತದೆ.
“Hands busy, hearts happy. Let creativity shine this summer!” ಎಂಬ ಘೋಷವಾಕ್ಯದೊಂದಿಗೆ ನಡೆಯುವ ಈ ಶಿಬಿರವು ಮಕ್ಕಳಷ್ಟೇ ಅಲ್ಲದೆ ವಯಸ್ಕರಿಗೂ ಮುಕ್ತವಾಗಿದೆ. ಭಾಗವಹಿಸುವವರಿಗೆ ಕೈಚಳಕ, ಕಲಾತ್ಮಕತೆ ಹಾಗೂ ಹೊಸ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವ ಕುರಿತು ಶಿಬಿರಲ್ಲಿ ತಿಳಿಸಲಾಗುತ್ತದೆ.
ಶಿಬಿರದ ಕೋರ್ಸ್ ಶುಲ್ಕ ₹2,999 ಆಗಿದ್ದು, ಆಸಕ್ತರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನೋಂದಣಿ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ 81231 63932 ಸಂಪರ್ಕಿಸಿ.

















