ಉಡುಪಿ ಜಿಲ್ಲೆಯ ಹಲವೆಡೆ ಇಂದು ಬೆಳಗಿನಿಂದ ಮಳೆ ಸುರಿದಿದ್ದು ಬಿಸಿಲ ದಾಹಕ್ಕೆ ಬೇಸತ್ತಿದ ಜನ ಕೊಂಚ ನಿರಾಳ ರಾಗಿದ್ದಾರೆ.
ಇಂದು ಬೆಳಿಗ್ಗೆ ಉಡುಪಿಯ ಕೆಲವು ಪ್ರದೇಶದಲ್ಲಿ ಭಾರಿ ಮಳೆ ಯಾಗಲಿದೆ ಇಂದು ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿತ್ತು ಬೆಳಗ್ಗಿನಿಂದ ಮೋಡ ಕವಿದ ವಾತಾವರಣವಿತ್ತು ಉಡುಪಿ ನಗರ ಸಂತೆಕಟ್ಟೆ ದೆಂದುೂರ ಕಟ್ಟೆ ಮಣಿಪಾಲ ಹಾಗೂ ಕಟಪಾಡಿಯಲ್ಲಿ ಉತ್ತಮ ಮಳೆ ಸುರಿಯುತ್ತಿದೆ ಕರ್ನಾಟಕ ವಿವಿಧ ಭಾಗಗಳಲ್ಲಿ ಮುಂದಿನ ಏಳು ದಿನಗಳ ಕಾಲ ಅಲ್ಲಲ್ಲಿ ಗುಡುಗು ಸಿಡಿಲು ಹಾಗೂ ಬಲವಾದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಮೇ 12 ರವರಿಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದು ಕೆಲವೇಡೆ ಭಾರಿ ಮಳೆಯು ಸುರಿಯಬಹುದೆಂದು ಎಚ್ಚರಿಕೆ ನೀಡಲಾಗಿದೆ.

















