ಉಡುಪಿ, ಮೇ 04: ಮುಂಬಯಿಯ ವಿಲೇಪರ್ಲೆ ದಕ್ಷಿಣ 3-ಮಿಸ್ಕಿಟ್ಟಾ ಹೌಸ್ ನಿವಾಸಿ ಪ್ರಸಾದ್ ಸುಂದರ ಶೆಟ್ಟಿ (52) ಎಂಬವರು ಕಳೆದ 5 ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಪ್ರತಿ ಮೂರು ತಿಂಗಳಿಗೊಮ್ಮೆ ಊರಿಗೆ ಬರುತ್ತಿದ್ದು, ಏಪ್ರಿಲ್ 26 ರಂದು ಮುಂಬೈನಿoದ ರೈಲಿನಲ್ಲಿ ಹೊರಟು ಏಪ್ರಿಲ್ 27 ರಂದು ಉಡುಪಿ ತಲುಪಿದಾಗ ರೈಲಿನಲ್ಲಿ ಪತ್ತೆಯಾಗದೆ ಕಾಣೆಯಾಗಿರುತ್ತಾರೆ.
5 ಅಡಿ 8 ಇಂಚು ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ತುಳು, ಇಂಗ್ಲಿಷ್, ಹಿಂದಿ ಹಾಗೂ ಮರಾಠಿ ಭಾಷೆ ಬಲ್ಲವರಾಗಿರುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಠಾಣಾ ದೂ.ಸಂ: 0820-2520444, ಉಡುಪಿ ಕಂಟ್ರೋಲ್ ರೂಂ: 0820-2526444, ಪೊಲೀಸ್ ನಿರೀಕ್ಷಕರು: 9480805408 ಹಾಗೂ ಪೊಲೀಸ್ ಉಪ ನಿರೀಕ್ಷಕರು: 9080805445 ಅನ್ನು ಸಂಪರ್ಕಿಸುವAತೆ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

















