ಮಂಗಳೂರು: ರಾಷ್ಟ್ರೀಯ ಗುಣಮಟ್ಟ ಸಮಾವೇಶದಲ್ಲಿ Mangalore International Airport ಮೂರು ಚಿನ್ನದ ಪ್ರಶಸ್ತಿಗಳನ್ನು ಗೆದ್ದು ಗಮನ ಸೆಳೆದಿದೆ. ವಿಮಾನ ನಿಲ್ದಾಣದ ತಂಡಗಳು Poka-Yoke ಪರಿಕಲ್ಪನೆಯ ಆಧಾರದ ಮೇಲೆ ನವೀನ ಮತ್ತು ಸುರಕ್ಷತಾ ಪರಿಹಾರಗಳನ್ನು ಪ್ರದರ್ಶಿಸಿ ಈ ಸಾಧನೆ ಮಾಡಿವೆ.
ಮಂಗಳೂರು ಅಪ್ಡೇಟರ್ ಸರ್ವಿಸಸ್ ಲಿಮಿಟೆಡ್ ಸಹಯೋಗದಲ್ಲಿ ನಡೆದ ಈ ಸಮಾವೇಶದಲ್ಲಿ, ಸಜಿತ್ ಇ.ವಿ. ಮತ್ತು ವಿಜಯಲಕ್ಷ್ಮಿ ನೇತೃತ್ವದ ತಂಡವು ಹೈ-ಮಾಸ್ಟ್ ನಿರ್ವಹಣೆಗೆ ರಿಮೋಟ್-ಕಂಟ್ರೋಲ್ ಅಪಾಯ ತಡೆ ಸಾಧನವನ್ನು ಅಭಿವೃದ್ಧಿಪಡಿಸಿ ಚಿನ್ನದ ಪ್ರಶಸ್ತಿಯನ್ನು ಪಡೆದುಕೊಂಡಿತು. ಇದೇ ವೇಳೆ ಕಿರಣ್ ಕುಮಾರ್ ಮತ್ತು ಮಂಜುನಾಥ್ ಅವರ ತಂಡವು ಪಿಎಲ್ಸಿ ಆಧಾರಿತ ನೀರಿನ ಮಟ್ಟ ಮೇಲ್ವಿಚಾರಣೆ ವ್ಯವಸ್ಥೆ ಅಳವಡಿಸಿ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದಕ್ಕಾಗಿ ಗೌರವಿಸಲ್ಪಟ್ಟಿತು.
ಇನ್ನು ಇಪ್ಸಿತಾ ಚೌಧರಿ ಮತ್ತು ಸಿದ್ಧಾರ್ಥ್ ಓಜಾ ಪ್ರತಿನಿಧಿಸುವ ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ವಿಭಾಗವು, ಏರ್ಸೈಡ್ ಕಾರ್ಯಾಚರಣೆಗಳಲ್ಲಿ ಮಾನವ ದೋಷ ಕಡಿಮೆ ಮಾಡುವ ಹಾಗೂ ದಟ್ಟಣೆ ಮತ್ತು ವ್ಯರ್ಥ ಸಮಯ ತಗ್ಗಿಸುವ ಪೋಕಾ-ಯೋಕ್ ಆಧಾರಿತ ಪರಿಹಾರಗಳಿಗಾಗಿ ಮತ್ತೊಂದು ಚಿನ್ನದ ಪ್ರಶಸ್ತಿಯನ್ನು ಗಳಿಸಿದೆ.
ಈ ಸಾಧನೆ ವಿಮಾನ ನಿಲ್ದಾಣವು ನವೀನತೆ ಮತ್ತು ಸುರಕ್ಷತೆಯತ್ತ ಹೊಂದಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತಿದ್ದು, ಒಟ್ಟಾರೆ ಕಾರ್ಯಾಚರಣೆಯ ದಕ್ಷತೆಯನ್ನು ಮತ್ತಷ್ಟು ಬಲಪಡಿಸಿದೆ.

















