UPSC/KAS/CA ಆಕಾಂಕ್ಷಿಗಳಿಗೆ ಸುವರ್ಣಾವಕಾಶ: 3 ವರ್ಷ ಊಟ-ವಸತಿಯೊಂದಿಗೆ ಉಚಿತ ಕೋಚಿಂಗ್!

ಬೆಂಗಳೂರು: ಎಷ್ಟೋ ವಿದ್ಯಾರ್ಥಿಗಳಿಗೆ, ಯುವಕರಿಗೆ ನಾನೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಬೇಕು ಅನ್ನೋ ಕನಸು ಸಾಮಾನ್ಯವಾಗಿರುತ್ತದೆ. ಆದರೆ ಕುಟುಂಬ, ಆರ್ಥಿಕ ಪರಿಸ್ಥಿತಿ ಇದಕ್ಕೆ ಪೂರಕವಾಗಿರುವುದಿಲ್ಲ. ಈ ದೃಷ್ಟಿಯಲ್ಲಿ ಕರ್ನಾಟಕದ ಬಡ ಹೆಣ್ಣುಮಕ್ಕಳಿಗೆಂದೇ ಸ್ಪರ್ಶ ಟ್ರಸ್ಟ್ UPSC, KAS ಹಾಗೂ CA ತರಬೇತಿ ಪಡೆಯಲು ಅಪರೂಪದ ಅವಕಾಶ ಒದಗಿಸಿದೆ. “ಯುವಿಕಾ” ಯೋಜನೆಯಡಿ 3 ವರ್ಷಗಳ ಕಾಲ ಸಂಪೂರ್ಣ ಉಚಿತ ಕೋಚಿಂಗ್, ಊಟ ಮತ್ತು ವಸತಿ ಸೌಲಭ್ಯ ನೀಡಲಾಗುತ್ತಿದೆ.

ಇವರಿಗಿದೆ ಅವಕಾಶ

ಈ ಯೋಜನೆ ಹೆಣ್ಣುಮಕ್ಕಳಿಗೆ ಮಾತ್ರ ಲಭ್ಯವಿದ್ದು,

  • ತಂದೆ-ತಾಯಿ ಇಲ್ಲದವರು
  • ಏಕ ಪೋಷಕರ ಕುಟುಂಬದವರು
  • CCI (ಪಾಲನಾ ಗೃಹ)ಗಳಲ್ಲಿ ಬೆಳೆದವರು
  • BPL ಕುಟುಂಬದವರಿಗೆ ಅವಕಾಶವಿದೆ.

21 – 27 ವರ್ಷದ ಹೆನ್ಣುಮಕ್ಕಳು ಅರ್ಜಿ ಸಲ್ಲಿಸಬಹುದಾಗಿದ್ದು, 40 – 50 ಸೀಟುಗಳು ಲಭ್ಯವಿದೆ.

ಉಚಿತ ತರಬೇತಿ ವಿಶೇಷತೆಗಳು

  • 3 ವರ್ಷಗಳ ಸಂಪೂರ್ಣ ಕೋಚಿಂಗ್
  • ಆನ್‌ಲೈನ್ + ನೇರ ತರಗತಿಗಳು
  • 24 ಗಂಟೆಗಳ ಅಧ್ಯಯನ ವಾತಾವರಣ
  • ಉಚಿತ ವಸತಿ ಮತ್ತು ಊಟ
  • ಉದ್ಯೋಗ ಸಿಗುವವರೆಗೆ ಬೆಂಬಲ

ಇಂಡಿಯಾ ಫರ್ ಐಎಎಸ್ India4IAS ಸಂಸ್ಥೆಯ ಸಹಯೋಗದೊಂದಿಗೆ ಈ ತರಬೇತಿ ನಡೆಯಲಿದ್ದು, ಮೇ 15, 2026 ರಿಂದ ತರಗತಿಗಳು ಆರಂಭವಾಗುತ್ತವೆ. www.sparsha.org ವೆಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಸಂಪರ್ಕ ಸಂಖ್ಯೆ 86600 96834, 82965 26507, 84314 71590